Select Your Language

Notifications

webdunia
webdunia
webdunia
webdunia

ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡ್ತೀವಿ : ಸೂಲಿಬೆಲೆ

webdunia
ವಿಜಯಪುರ , ಸೋಮವಾರ, 29 ಆಗಸ್ಟ್ 2022 (09:02 IST)
ವಿಜಯಪುರ : ಗಣೇಶ ಹಬ್ಬದಂದು ಗಣೇಶ ಮೂರ್ತಿಯೊಂದಿಗೆ ಸಾವರ್ಕರ್ ಫೋಟೋವನ್ನೂ ಇಡಲು ವಿಚಾರ ಮಾಡಲಾಗಿದೆ ಎಂದು ಯುವ ಬ್ರಿಗೆಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಪಟ್ಟಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್ ಅವರಂಥ ರಾಷ್ಟ್ರ ನಾಯಕರನ್ನು ಯಾರೇ ಅವಮಾನ ಮಾಡಿದ್ರೂ ಸಹಿಸಿಕೊಳ್ಳುವ ಮಾತೇ ಇಲ್ಲ ಎಂದಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಾವರ್ಕರ್ ಫೋಟೊವನ್ನು ಮುಸ್ಲಿಂ ಏರಿಯಾದಲ್ಲಿ ಹಾಕಬಾರದು, ಅವರ ಫೋಟೊವನ್ನು ಹಾಕಲೇಬಾರದು ಎಂಬ ಚಿಂತನೆಯನ್ನು ಹೊತ್ತಿದ್ದಾರೆ.

ಅದಕ್ಕೆ ಪ್ರತಿಯಾಗಿ ಈ ಬಾರಿ ಗಣೇಶ ಪೆಂಡಾಲ್ಗಳಲ್ಲಿ ಸಾವರ್ಕರ್ ಫೋಟೊ ಹಾಕಬೇಕು ಎಂದು ಗಜಾನನ, ಹಿಂದೂಪರ ಸಂಘಟನೆಗಳು ಹಾಗೂ ರಾಷ್ಟ್ರಭಕ್ತರು ಆಲೋಚನೆ ಮಾಡಿದ್ದೇವೆ. ಅದಕ್ಕೆ ಪೂರಕವಾಗಿ ಇಂದು ವಿಜಯಪುರದಲ್ಲಿ ಬೈಠಕ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಮಂದಿರಗಳಿಗೆ ಹಣ ಕೊಡುವುದನ್ನು ನಿಲ್ಲಿಸಿ : ಮುತಾಲಿಕ್