Select Your Language

Notifications

webdunia
webdunia
webdunia
webdunia

ಗಣೇಶ ವಿಸರ್ಜನೆಗಾಗಿ ನಗರದಲ್ಲಿ ಬಿಬಿಎಂಪಿಯಿಂದ ಸಕಲ ಸಿದ್ಧತೆ

All preparations are made by BBMP in the city for Ganesha discharge
bangalore , ಭಾನುವಾರ, 28 ಆಗಸ್ಟ್ 2022 (21:12 IST)
ಗಣೇಶ ವಿಸರ್ಜನೆಗಾಗಿ ನಗರದಲ್ಲಿ ಈಗಾಗಲೇ ಬಿಬಿಎಂಪಿ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದೆ.ಗಣೇಶ ವಿಸರ್ಜನೆಗೆಂದು  ಸಿಬ್ಬಂದಿಗಳು ನಗರದ ಕಲ್ಯಾಣಿಗಳನ್ನು ಸ್ವಚ್ಛತೆಗೊಳಿಸಿದ್ದಾರೆ.
 
ಕಲ್ಯಾಣಿಯ ಸುತ್ತಲೂ ಇರುವ ಕಂಬಿಗಳಿಗೆ ಸಿಬ್ಬಂದಿಗಳು ಬಣ್ಣ ಹಚ್ಚುತ್ತಿದ್ದಾರೆ.ಕಲ್ಯಾಣಿಯ ಸುತ್ತಲೂ ವಿದ್ಯುತ್ ದೀಪಗಳು ಅದರಲ್ಲೂ ಪ್ರಮುಖವಾಗಿ ಸಿಸಿ ಕ್ಯಾಮರಾಗಳನ್ನ ಕೂಡ ಅಳವಡಿಕೆ ಮಾಡುತ್ತಿದ್ದಾರೆ.ಯಾವುದೇ ಅಹಿತಕರ ಘಟನೆಗಳು, ಗಲಭೆಗಳು ನಡೆಯದಂತೆ ಎಚ್ಚರಿಕೆವಹಿಸಲಾಗಿದೆ. ಈಗಾಗಲೇ  ಸುಮಾರು ೩೦ ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಗಳನ್ನ ಕೂಡ  ನಗರದಲ್ಲಿ ನಿಯೋಜನೆ ಮಾಡಲಾಗಿದೆ.
 
ಇನ್ನು ನಗರದಲ್ಲಿರುವ ಹಲಸೂರು, ಯಡಿಯೂರು, ಸ್ಯಾಂಕಿಟ್ಯಾಂಕಿ, ಯಲಹಂಕ, ಹಾಗೂ ನಗರದ ಹಲವು ಕಡೆಗಳಲ್ಲಿ ಗಣೇಶ ವಿಸರ್ಜನೆಗೆ ಎಲ್ಲಾ ರೀತಿ ತಯಾರಿ ಮಾಡಿಕೊಳ್ಳಲಾಗಿದೆ.ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ನೀರು ಕೂಡ ತುಂಬಿಸಲಾಗುತ್ತಿದೆ.ಒಟ್ನಲಿ ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಗಣೇಶ ಹಬ್ಬದ ಪ್ರಯುಕ್ತ ನಗರದಲ್ಲಿ ಬಂದೋಬಸ್ತ್ ಗೆ ಬಾರಿ ಪ್ಲಾನ್