ಹೈದರಾಬಾದ್: ಟಾಲಿವುಡ್ ನಲ್ಲಿ ಸ್ಟಾರ್ ಕಿಡ್ ಗಳು ಬಣ್ಣದ ಬದುಕಿಗೆ ಎಂಟ್ರಿ ಕೊಡುವುದು ಸಾಮಾನ್ಯವಾಗಿದೆ. ಅಲ್ಲು ಅರ್ಜುನ್ ಪುತ್ರಿ ಈಗಾಗಲೇ ಶಾಕುಂತಲಾ ಸಿನಿಮಾದಲ್ಲಿ ಅಭಿನಯಿಸಿ ಸೈ ಎಂದಿದ್ದಾರೆ.
ಇದೀಗ ಜ್ಯೂ.ಎನ್ ಟಿಆರ್ ಪುತ್ರ ಅಭಯ್ ರಾಮ್ ಮತ್ತು ಮಹೇಶ್ ಬಾಬು ಪುತ್ರಿ ಸಿತಾರ ಕೂಡಾ ಬೆಳ್ಳಿ ಬದುಕಿಗೆ ಕಾಲಿಡಲಿದ್ದಾರೆ. ಇವರಿಗೆ ಮೊದಲ ಅವಕಾಶ ನೀಡುತ್ತಿರುವುದು ಸ್ಟಾರ್ ನಿರ್ದೇಶಕ ರಾಜಮೌಳಿ!
ರಾಜಮೌಳಿಯ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆಗೆ. ಈ ಸಿನಿಮಾಗೆ ಆಗಸ್ಟ್ 9 ರಂದು ಮಹೇಶ್ ಬಾಬು ಜನ್ಮದಿನದಂದು ಶುರುವಾಗುವ ಸಾಧ‍್ಯತೆಯಿದೆ. ಈ ಸಿನಿಮಾದಲ್ಲಿ ಅಭಯ್ ರಾಮ್ ಮತ್ತು ಸಿತಾರಾ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬರಬೇಕಿದೆ.