Daily Horoscope

Select Your Language

Notifications

webdunia
webdunia
webdunia
webdunia

ವೋಟ್ ಚೋರಿ ಚರಿತ್ರೆಯನ್ನೇ ಹೊಂದಿರುವ ಕಾಂಗ್ರೆಸ್ ಗೆ ಬಿಜೆಪಿ ಮೇಲೆ ಆರೋಪಿಸಲು ನೈತಿಕತೆಯಿಲ್ಲ: ಸಿಟಿ ರವಿ

CT Ravi
ಬೆಳಗಾವಿ: ವೋಟ್ ಚರಿತ್ರೆಯನ್ನೇ ಹೊಂದಿರುವ ಕಾಂಗ್ರೆಸ್ ಗೆ ಬಿಜೆಪಿ ಮೇಲೆ ಆರೋಪಿಸಲು ಮತ್ತು ಬೋಧನೆ ಮಾಡಲು ಯಾವ ನೈತಿಕತೆಯಿದೆ ಎಂದು ವಿಧಾನಪರಿಷತ್ ಸದಸ್ಯ ಸಿಟಿ ರವಿ ಪ್ರಶ್ನೆ ಮಾಡಿದ್ದಾರೆ.

ಲೋಕಸಭೆಯಲ್ಲಿ ಗೃಹಸಚಿವ ಅಮಿತ್ ಶಾ, ಕಾಂಗ್ರೆಸ್ ಇತಿಹಾಸದಲ್ಲಿ ಮೂರು ಪ್ರಮುಖ ವೋಟ್ ಚೋರಿ ಮಾಡಿದೆ. ಮೊದಲು ವೋಟ್ ಚೋರಿ ಮಾಡಿದ್ದು ನೆಹರೂ ಎಂದಿದ್ದರು. ಅವರ ಮಾತುಗಳನ್ನು ಉಲ್ಲೇಖಿಸಿ ಸಿಟಿ ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಲೋಕಸಭೆಯಲ್ಲಿ ಭಾಷಣದ ವೇಳೆ ಮಾನ್ಯ ಗೃಹ ಸಚಿವರಾದ ಶ್ರೀ ಅಮಿತ್ ಶಾಜಿ ಅವರು ಒಂದು ಆಸಕ್ತಿಕರ ವಿಚಾರವನ್ನು ಪ್ರಸ್ತಾಪಿಸಿದರು. ಕಾಂಗ್ರೆಸ್ ಪದೇ ಪದೇ 'ವೋಟ್ ಚೋರಿ' ಎಂದೇಕೆ ಅರಚುತ್ತದೆ ಎಂದರೆ, ಇದಕ್ಕೆ ಉತ್ತರ ಸರಳ: ಕಾಂಗ್ರೆಸ್ ಸ್ವತಃ ಮತಗಳ್ಳತನದಲ್ಲಿ ಪಳಗಿದ ಪಕ್ಷ.

ಜವಾಹರಲಾಲ್ ನೆಹರೂ ಅವರಿಗಿಂತ ಸರ್ದಾರ್ ಪಟೇಲರಿಗೆ ಹೆಚ್ಚಿನ ಮತಗಳು ಬಂದಿದ್ದರೂ, ವೋಟ್ ಚೋರಿ ಮೂಲಕ ನೆಹರೂ ಪ್ರಧಾನಿಯಾಗಿದ್ದರು. ಇದೇ ಪರಂಪರೆಯನ್ನು ಇಂದಿರಾ ಗಾಂಧಿ ಮುಂದುವರಿಸಿದರು. ಸಹಜವಾಗಿಯೇ, ಎಲ್ಲರೂ ವೋಟ್ ಚೋರಿ ಮಾಡುತ್ತಾರೆ ಎಂದು ಕಾಂಗ್ರೆಸ್ ಭಾವಿಸಿದಂತಿದೆ.

ಆದರೆ, ಪರಿಸ್ಥಿತಿಯ ವ್ಯಂಗ್ಯ ಗಮನಿಸಿ: ದಶಕಗಳ ಕಾಲ ಮತಗಳವಿನ ಮೇಲೆಯೇ ಅವಲಂಬಿತವಾಗಿದ್ದ ಕಾಂಗ್ರೆಸ್ ಪಕ್ಷ, ಇಂದು ತನ್ನ ಸುಶಾಸನ, ಪಾರದರ್ಶಕ ಆಡಳಿತ ಮತ್ತು ಕಠಿಣ ಪರಿಶ್ರಮದಿಂದ ಜನರ ವಿಶ್ವಾಸ ಗಳಿಸಿರುವ ಬಿಜೆಪಿಗೆ ಬೋಧನೆ ಮಾಡುತ್ತಿದೆ!

ಕಾನೂನು ಪುಸ್ತಕದ ಎಲ್ಲ ಕಾನೂನುಗಳನ್ನೂ ಮನಬಂದಂತೆ ತಿರುಚಿದ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿಗೆ ನೈತಿಕತೆ ಬೋಧಿಸುವ ಯಾವ ಅರ್ಹತೆಯಿದೆ? ಇದು ರಾಜಕೀಯವಲ್ಲ, ಕಾಂಗ್ರೆಸ್ ಪಕ್ಷದ ಹಾಸ್ಯವಷ್ಟೇ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂಗಳ ಪವಿತ್ರ ಕಾರ್ತಿಕ ದೀಪಕ್ಕೆ ಅನುಮತಿ ನೀಡಿದ ಜಡ್ಜ್ ವಿರುದ್ಧ ಸಹಿ ಹಾಕಿದ ರಾಜ್ಯದ ಮೂವರು ಕೈ ಸಂಸದರು ಇವರೇ