Select Your Language

Notifications

webdunia
webdunia
webdunia
webdunia

ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಬೇಕು – ಪ್ರಿಯಾಂಕ್ ಖರ್ಗೆ

Cow Slaughter Prohibition Act should be withdrawn
bangalore , ಬುಧವಾರ, 30 ನವೆಂಬರ್ 2022 (19:59 IST)
ಗೋಹತ್ಯೆ ನಿಷೇಧ ಕಾಯ್ದೆಯಿಂದ ರಾಜ್ಯಕ್ಕೆ 5,280 ಕೋಟಿ ಆರ್ಥಿಕ ಹೊಣೆ ಆಗುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಈ ಕುರಿತು ಕೆಪಿಸಿಸಿ ಕಛೇರಿಯಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿ ಕಳೆದ ವರ್ಷ ಜನವರಿಯಲ್ಲಿ ಕ್ರಾಂತಿ ಕಾರಿ ವಿಧೇಯಕ ತಂದಿದ್ರು ಅದು ಗೋ ಹತ್ಯೆ ನಿಷೇಧ ಕಾಯ್ದೆ.ಕೇಸರಿ ಶಾಲು,ಜೈಕಾರ ಕೂಗಿ ಬಿಲ್ ಪಾಸ್ ಮಾಡಿದ್ರು ಈ ವಿಧೇಯಕ ರೈತರಿಗೆ, ಕಾರ್ಮಿಕರಿಗೆ ಉದ್ಯಮಿಗಳಿಗೆ ಎಷ್ಟು ಲಾಭ ಆಯ್ತು.ಇದರ ಬಗ್ಗೆ ಯಾರ ಯೋಚನೆ ಮಾಡಲೇ ಇಲ್ಲ.ಈ  ಕಾಯ್ದೆಯಿಂದ 5,280 ಕೋಟಿ ಆರ್ಥಿಕ ಹೊಣೆ ರಾಜ್ಯಕ್ಕೆ ಆಗುತ್ತಿದೆ. 500 ಕೋಟಿ ಇದ್ದ ಲೆದರ್ ಇಂಡಸ್ಟ್ರಿ ಆದಾಯ 166.74 ಕೋಟಿಗೆ ಇಳಿಕೆಯಾಗಿದೆ. ಲೆದರ್ ಕಾರ್ಖಾನೆಗಳಲ್ಲಿ 3.5 ಲಕ್ಷ  ಕಾರ್ಮಿಕರು‌ ಇದ್ದಾರೆ.ಅವರೆಲ್ಲರೂ ಬೀದಿಗೆ ಬಂದಿದ್ದಾರೆ, ಇದಕ್ಕೆ ಪರ್ಯಾಯ ವ್ಯವಸ್ಥೆ ಸರ್ಕಾರ ಮಾಡಿದ್ಯಾ?. ಹಣಕಾಸು ಇಲಾಖೆ ಈ ಕಾಯ್ದೆ ಜಾರಿಯ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ಕೋರಿತ್ತು, ಆರ್ಥಿಕ ಪರಿಸ್ಥಿತಿ ಹಾಗೂ ಪರಿಣಾಮಗಳ ಕಾರಣದಿಂದ ಹಣಕಾಸು ಇಲಾಖೆ ಈ ಎಚ್ಚರಿಕೆ ನೀಡಿತ್ತು. ಆದ್ದರಿಂದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಸರ್ಕಾರ ಕೂಡಲೇ ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಂದ ಹೆಂಡತಿ