Select Your Language

Notifications

webdunia
webdunia
webdunia
webdunia

ಮಲ್ಲಿಕಾರ್ಜುನ ಖರ್ಗೆಗೆ ಕೋರ್ಟ್​ ಸಮನ್ಸ್​​

ಮಲ್ಲಿಕಾರ್ಜುನ ಖರ್ಗೆಗೆ ಕೋರ್ಟ್​ ಸಮನ್ಸ್​​
ಪಂಜಾಬ್‌ , ಸೋಮವಾರ, 15 ಮೇ 2023 (21:01 IST)
ಬಜರಂಗದಳವನ್ನು PFI ಸಂಘಟನೆಗೆ ಹೋಲಿಕೆ ಮಾಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕೋರ್ಟ್​ ಸಮನ್ಸ್ ನೀಡಿದೆ. ​​ಬಜರಂಗದಳ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಅವರಿಗೆ ಪಂಜಾಬ್‌ನ ಸಂಗ್ರೂರ್ ನ್ಯಾಯಾಲಯ ಇಂದು ಸಮನ್ಸ್ ಜಾರಿ ಮಾಡಿದೆ. ಖರ್ಗೆಯವರು ಈ ಹಿಂದೆ ಬಜರಂಗದಳ ಸಂಘಟನೆಯನ್ನು PFI ಜೊತೆ ಹೋಲಿಕೆ ಮಾಡಿದ್ದರು. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಿಶ್ವ ಹಿಂದೂ ಪರಿಷತ್‌ ಚಂಡೀಗಡ ಘಟಕವು ನೂರು ಕೋಟಿ ರೂಪಾಯಿ ಮಾನಹಾನಿ ಪರಿಹಾರ ಕೋರಿ ನೋಟಿಸ್‌ ಜಾರಿ ಮಾಡಿತ್ತು. ತನ್ನ ಯುವ ಘಟಕವಾದ ಬಜರಂಗದಳಕ್ಕೆ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಅಪಮಾನ ಮಾಡಲಾಗಿದೆ ಎಂದು ‘VHP’ ಆರೋಪಿಸಿದೆ. ವಿಶ್ವ ಹಿಂದೂ ಪರಿಷತ್‌ನ ಚಂಡೀಗಡ ಘಟಕ ಮತ್ತು ಅದರ ಯುವ ಘಟಕ ಬಜರಂಗ ದಳ ಮೇ 4ರಂದು ನೋಟಿಸ್ ಜಾರಿ ಮಾಡಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪಗೆ ಕಜಕಿಸ್ತಾನದಿಂದ ಬೆದರಿಕೆ ಕರೆ