Select Your Language

Notifications

webdunia
webdunia
webdunia
webdunia

ಸಿಎಂ ಪಟ್ಟಕ್ಕಾಗಿ ಸಿದ್ದು ಬಿಗಿಪಟ್ಟು

ಸಿಎಂ ಪಟ್ಟಕ್ಕಾಗಿ ಸಿದ್ದು ಬಿಗಿಪಟ್ಟು
bangalore , ಸೋಮವಾರ, 15 ಮೇ 2023 (17:44 IST)
2018ರಲ್ಲಿ ಇದೇ ತನ್ನ ಕೊನೆ ಚುನಾವಣೆ ಎಂದು ಹೇಳಿ ಮತಪ್ರಚಾರ ನಡೆಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಚುನಾವಣೆಯಲ್ಲೂ ಸ್ಪರ್ಧಿಸಿದ್ರು.. ಇದೀಗ ತಾನೆ ಸಿಎಂ ಆಗಬೇಕೆಂದು ಪಟ್ಟು ಹಿಡಿದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮಧ್ಯಾಹ್ನ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. AICC ವರಿಷ್ಠರ ಭೇಟಿಗೆ ಸಿದ್ದರಾಮಯ್ಯ ಮುಂದಾಗಿದ್ದು, ಸಂಜೆ AICC ಅಧ್ಯಕ್ಷ ಮಲ್ಲಿಕಾರ್ಜುನ​​​ ಖರ್ಗೆ, ರಾಹುಲ್ ಗಾಂಧಿಯನ್ನು ಭೇಟಿ ಮಾಡಲಿದ್ದಾರೆ. ಹೈಕಮಾಂಡ್ ಮುಂದೆ ಸಿದ್ದರಾಮಯ್ಯ ವಾದವೇನು ಎಂಬುದನ್ನು ನೋಡುವುದಾದರೆ, ಅನುಭವ, ಹಿರಿತನಕ್ಕೆ ಮನ್ನಣೆ ಕೊಡಬೇಕು.. ಶಾಸಕರ ಅಭಿಪ್ರಾಯದಂತೆಯೇ ಸಿಎಂ ಹೆಸರು ಘೋಷಣೆ ಮಾಡಬೇಕು.. ವೀಕ್ಷಕರಿಂದ ಜನಾಭಿಪ್ರಾಯ ಸಂಗ್ರಹ ಮಾಡಿದರೂ ಸ್ವಾಗತ ಎಂದು ಹೇಳಿದ್ದಾರಂತೆ. ಇನ್ನು ನಾನು ಸಿಎಂ ಆಗಿದ್ದಾಗ ಕೊಟ್ಟ ಭಾಗ್ಯಗಳು ಜನಮನದಲ್ಲಿವೆ. ನನ್ನ ವರ್ಚಸ್ಸು ಹಾಗೂ ಅಹಿಂದ ಸಿದ್ದಾಂತ ಕೈ ಹಿಡಿದಿವೆ. ವಿಧಾನಸಭೆಯಲ್ಲಿ ಬಿಜೆಪಿ ಸರ್ಕಾರವನ್ನ ಕಟ್ಟಿಹಾಕಿದ್ದು ನಾನು. ಡಿಕೆಶಿಗೆ ಸಿಎಂ ಸ್ಥಾನ ನೀಡಿದ್ರೆ ನನ್ನ ಹಿರಿತನ, ವರ್ಚಸ್ಸಿಗೆ ಧಕ್ಕೆಯಾಗುತ್ತೆ ಎಂಬ ವಾದ ಸಿದ್ದರಾಮಯ್ಯನವರದ್ದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸೀಟು ಗೆಲ್ಲಿಸುವ ಹೊಣೆ ನನ್ನದು.. ಇದು ನನ್ನ ಕೊನೆಯ ಚುನಾವಣೆ, ಪುತ್ರ ಯತೀಂದ್ರ ಕ್ಷೇತ್ರ ತ್ಯಾಗ ಮಾಡಿದ್ದಾನೆ. ಐದು ವರ್ಷವೂ ಸಿಎಂ ಒಬ್ಬರೇ ಆಗಿರಬೇಕು. ಅನೇಕ ಬಾರಿ ಬಜೆಟ್ ಮಂಡಿಸಿದ್ದೇನೆ, ಆರ್ಥಿಕ ಪರಿಸ್ಥಿತಿ ಬಗ್ಗೆ ಗೊತ್ತಿದೆ ಎಂದು ವಾದ ಮಂಡಿಸುವ ಸಾಧ್ಯತೆ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ತದಲ್ಲಿ ಚಿತ್ರ ಬಿಡಿಸಿ ಡಿಕೆಶಿಗೆ ಗಿಫ್ಟ್