Select Your Language

Notifications

webdunia
webdunia
webdunia
webdunia

ಡಿಕೆಶಿ ಪರ ಲಿಂಗಾಯತ ಶ್ರೀಗಳ ಒಲವು

Favor of Lingayat Sri for Dkeshi
bangalore , ಸೋಮವಾರ, 15 ಮೇ 2023 (16:56 IST)
KPCC ಅಧ್ಯಕ್ಷ D.K ಶಿವಕುಮಾರ್​​​ ಪರ ಲಿಂಗಾಯತ ಸ್ವಾಮೀಜಿಗಳು ನಿಂತಿದ್ದಾರೆ.. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಒಡೆಯುವ ಪ್ರಯತ್ನ ಮಾಡಿದ್ರು ಅನ್ನೋ ಕೋಪ ಲಿಂಗಾಯತ ಶ್ರೀಗಳಿಗಿದ್ದು, ಡಿಕೆಶಿಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿಯೆ ಸಿದ್ದರಾಮಯ್ಯ ವಿರುದ್ದ ಲಿಂಗಾಯತ ಸ್ವಾಮೀಜಿಗಳು ಒಲವು ಹೊಂದಿಲ್ಲ. ಇತ್ತ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳಿಂದ ಸಹ ಡಿಕೆಶಿ ಸಿಎಂ ಮಾಡುವಂತೆ ಒತ್ತಡ ಕೇಳಿ ಬರ್ತಿದೆ. ಪಕ್ಷಕ್ಕೋಸ್ಕರ ತಮ್ಮ ಜೀವನವನ್ನೇ ತ್ಯಾಗ ಮಾಡಿರೋ ವ್ಯಕ್ತಿ ಡಿಕೆಶಿ, ಹಾಗಾಗಿ ಈ ಬಾರಿ ಡಿಕೆಶಿಯನ್ನು ಸಿಎಂ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ. ಡಿಕೆಶಿಯೇ ಮೊದಲ ಸಿಎಂ ಆಗಲಿ ಅನ್ನೋದು ಬಹುತೇಕ ಸ್ವಾಮೀಜಿಗಳ ಅಭಿಪ್ರಾಯವಾಗಿದೆ. ಇನ್ನು ದಲಿತ ನಾಯಕರು ಸಹ ಡಿ.ಕೆ ಶಿವಕುಮಾರ್​​​ ಪರ ಬ್ಯಾಟಿಂಗ್​ ಮಾಡ್ತಿದ್ದಾರೆ. ಡಿಕೆಶಿಯನ್ನ ಸಿಎಂ ಮಾಡಲು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹಾಗೂ AICC ಅಧ್ಯಕ್ಷ ಮಲ್ಲಿಕಾರ್ಜುನ್​​ ಖರ್ಗೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಹೈಕಮಾಂಡ್​ ಅಂತಿಮ ತೀರ್ಮಾನ ಮಾಡಲಿದೆ. ಕಳೆದ ರಾತ್ರಿ ನಡೆದ ಗೋಲ್ಡನ್ ಬಾಕ್ಸ್ ವೋಟಿಂಗ್​​ನಲ್ಲಿ ಬಹುತೇಕರು ಹೈಕಮಾಂಡ್ ತೀರ್ಮಾನ ಎಂದು ನಮೂದಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೆಹಲಿಯಿಂದಲೇ ಸಿಎಂ‌ ಯಾರು ಎಂದು ಅನೌನ್ಸ್ ಆಗೋ ಸಾಧ್ಯತೆ ಇದೆ

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಅಂಗಳಕ್ಕೆ ಸಿಎಂ ಆಯ್ಕೆ ಚೆಂಡು