Publish Date: Mon, 15 May 2023 (17:56 IST)
Updated Date: Mon, 15 May 2023 (17:39 IST)
ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಆಯ್ಕೆಗೆ ಕಸರತ್ತು ಮುಂದುವರೆದಿದೆ. ರಾಜ್ಯಾದ್ಯಂತ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಸಿಎಂ ಆಗಬೇಕೆಂದು ಅವರ ಅಭಿಮಾನಿಗಳು ಪಟ್ಟು ಹಿಡಿದ್ದಾರೆ.. ಅಹಿಂದ ನಾಯಕ ಸಿದ್ದರಾಮಯ್ಯ ಈ ಬಾರಿ ಸಿಎಂ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಂತೆಯೇ ಸಿದ್ದರಾಮಯ್ಯ ತವರಿನಲ್ಲಿ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಮೈಸೂರು ತಾಲ್ಲೂಕು ಕೀರಾಳು ಗ್ರಾಮದಲ್ಲೂ ಸಿದ್ದು ಸಿಎಂ ಫ್ಲೆಕ್ಸ್ ರಾರಾಜಿಸಿವೆ. 2ನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸುತ್ತಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು ಎಂಬ ಫ್ಲೆಕ್ಸ್ ಎಲ್ಲೆಡೆ ಕಾಣಿಸಿಕೊಳ್ಳುತ್ತಿವೆ. ಮೈಸೂರಿನ ಸಿದ್ದರಾಮಯ್ಯ ಟಿ.ಕೆ ಬಡಾವಣೆ ನಿವಾಸದ ಮುಂದೆಯೂ ಫ್ಲೆಕ್ಸ್ ಹಾರಾಡಿವೆ. ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಿಮಾನದ ಅಭಿನಂದನೆ ಎಂಬ ಬರಹದ ಫ್ಲೆಕ್ಸ್ ಕಾಣಿಸಿಕೊಂಡಿವೆ.