Select Your Language

Notifications

webdunia
webdunia
webdunia
webdunia

ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥಸಂಚಲನದ ಬಗ್ಗೆ ಕೋರ್ಟ್ ಮಹತ್ವದ ನಿರ್ಧಾರ

RSS

Krishnaveni K

ಕಲಬುರಗಿ , ಶುಕ್ರವಾರ, 24 ಅಕ್ಟೋಬರ್ 2025 (16:50 IST)
Photo Credit: X

ಕಲಬುರಗಿ: ನವಂಬರ್ 2 ರಂದು ಚಿತ್ತಾಪುರದಲ್ಲಿ ನಡೆಸಲುದ್ದೇಶಿಸಿರುವ ಆರ್ ಎಸ್ಎಸ್ ಪಥಸಂಚಲನದ ಬಗ್ಗೆ ಕಲಬುರಗಿ ಹೈಕೋರ್ಟ್ ಪೀಠ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಚಿತ್ತಾಪುರದಲ್ಲಿ ನಡೆಸಲುದ್ದೇಶಿಸಿರುವ ಪಥಸಂಚಲನಕ್ಕೆ ಸರ್ಕಾರ ಅನುಮತಿ ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ಆರ್ ಎಸ್ಎಸ್ ಕೋರ್ಟ್ ಮೆಟ್ಟಿಲೇರಿತ್ತು. ಇಂದು ಈ ವಿಚಾರವಾಗಿ ತೀರ್ಪು ನೀಡುವ ನಿರೀಕ್ಷೆಯಿತ್ತು. ಆದರೆ ಈಗ ಅಕ್ಟೋಬರ್ 30 ಕ್ಕೆ ತೀರ್ಪು ಮುಂದೂಡಿಕೆ ಮಾಡಿದೆ.

ಚಿತ್ತಾಪುರದಲ್ಲಿ ಪರಿಸ್ಥಿತಿ ನೋಡಿಕೊಂಡು ತೀರ್ಪು ಪ್ರಕಟಿಸಲು ತೀರ್ಮಾನಿಸಿದೆ. ಈ ಸಂಬಂಧ ಅಕ್ಟೋಬರ್ 30 ಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ಪಥಸಂಚಲನದಿಂದ ಸಂಚಾರಕ್ಕೆ ತೊಡಕುಂಟಾಗಲಿದೆ ಎಂದು ಜಿಲ್ಲಾಡಳಿತ ಹೇಳಿತ್ತು. ಹೀಗಾಗಿ ಶಾಂತಿ ಸಭೆ ನಡೆಸಿ ಎಲ್ಲರಿಗೂ ಸಮಾಧಾನವಾಗುವಂತೆ ಸಮಸ್ಯೆ ಬಗೆಹರಿಸಿ ಎಂದು ಹೈಕೋರ್ಟ್ ಪೀಠ ಹೇಳಿದೆ. ಸದ್ಯಕ್ಕೆ ಆರ್ ಎಸ್ಎಸ್ ಮುಖಂಡರಿಗೆ ಕೋರ್ಟ್ ನಿರ್ಧಾರ ಕೊಂಚ ನಿರಾಶೆ ತಂದಿದೆ. ಆದರೆ ಆರ್ ಎಸ್ಎಸ್ ಮನವಿಯನ್ನು ಕೋರ್ಟ್ ತಳ್ಳಿ ಹಾಕಿಲ್ಲ ಎನ್ನುವುದು ಸಮಾಧಾನಕರ ಅಂಶವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಸಂದರ್ಭ ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಸ್ಕೆಂಚ್ ಹಾಕಿದ್ದ ಐಸಿಎಸ್ ಉಗ್ರರು ಅರೆಸ್ಟ್‌