Select Your Language

Notifications

webdunia
webdunia
webdunia
Sunday, 13 April 2025
webdunia

ಮಕ್ಕಳಾಗಿಲ್ಲ ಎಂದು ನದಿ ಹಾರಿದ ದಂಪತಿ; ಪತಿ ಸಾವು-ಪತ್ನಿ ಬಚಾವ್

ಮಕ್ಕಳು
ವಿಜಯಪುರ , ಭಾನುವಾರ, 26 ಮೇ 2019 (15:59 IST)
ನದಿಗೆ ಹಾರಿ ದಂಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಪತಿ ಸಾವನ್ನಪ್ಪಿದ್ದು ಪತ್ನಿ ಬದುಕಿ ಉಳಿದಿದ್ದಾರೆ.

ವಿಜಯಪುರ ಜಿಲ್ಲೆಯ ಕೋಲಾರ ಬ್ರೀಡ್ಜ ನಿಂದ ಕೃಷ್ಣಾ ನದಿಗೆ ಹಾರಲು ಯತ್ನಿಸಿದ್ದಾರೆ ದಂಪತಿ. ಸೇತುವೆ ಮೇಲಿನಿಂದ ಹಾರುವಾಗ ಸೀರೆಯ ಸೆರಗು ಬಿಚ್ಚಿ ಪತ್ನಿ ಮಲ್ಲಮ್ಮ ಪಾರಾಗಿದ್ದಾರೆ.

ನೀರಿನಲ್ಲಿ ಮುಳುಗಿದ್ದ ಮೃತ ರಮೇಶ ಮಳೆಪ್ಪನವರ ದೇಹಕ್ಕಾಗಿ ಮುಂದುವರೆದಿದೆ ಶೋಧ ಕಾರ್ಯಾಚರಣೆ. ಮದುವೆಯಾಗಿ ನಾಲ್ಕು ವರ್ಷ ಕಳೆದರೂ ಮಕ್ಕಳಾಗಲಿಲ್ಲ ಎಂದು ಮನನೊಂದು ಆತ್ಮ ಹತ್ಯೆಗೆ ಯತ್ನಿಸಿದ್ದರು ದಂಪತಿ.
ಬ್ರೀಡ್ಜ ಮೇಲಿನಿಂದ ಹಾರಿದ್ದಾರೆ ರಮೇಶ. ಗಂಡನ ಜೊತೆಯಲ್ಲಿ ನದಿಗೆ ಹಾರುವಾಗ ಸೇತುವೆಯ ಗೋಡೆಗೆ ಮಲ್ಲಮ್ಮಳ ಕಾಲು ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಕೋಲಾರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮಲ್ಲಮ್ಮ. ಬೀಳಗಿ ತಾಲೂಕಿನ ತೋಳಮಟ್ಟಿ ಗ್ರಾಮದ ದಂಪತಿ ಇವರಾಗಿದ್ದಾರೆ.

ಮದುವೆ ಕಾರ್ಯ ಮುಗಿಸಿಕೊಂಡು ಮಲ್ಲಮ್ಮ ನ ತವರು ಮನೆ ಬಸವನ ಬಾಗೇವಾಡಿ ತಾಲೂಕಿನ ಸಿದ್ದನಾಥ ಗ್ರಾಮಕ್ಕೆ ಬರುವಾಗ ಕೊಲ್ಹಾರ ಸೇತುವೆ ಹತ್ತಿರ ನಡೆದ ಘಟನೆ ಇದಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಈಶ್ವರ ಖಂಡ್ರೆ ರಾಜೀನಾಮೆ?