ಸಿಲಿಕಾನ್ ಸಿಟಿಯಲ್ಲಿ ಖೋಟಾ ನೋಟಿನ ಹಾವಳಿ ನಿಂತಂಗೆ ಕಾಣ್ತಿಲ್ಲ. ಬಿಹಾರದಿಂದ ನಕಲಿ ನೋಟ್ ತಂದು ಬೆಂಗಳೂರಿನಲ್ಲಿ ಚಲಾವಾಣೆ ಮಾಡ್ತಿದ್ದ ಜಾಲವನ್ನು ಕಾಟನ್ ಪೇಟೆ ಇನ್ಸ್ಪೆಕ್ಟರ್ ಬಾಲರಾಜ್ ಅಂಡ್ ಟೀಮ್ ಪತ್ತೆ ಮಾಡಿದೆ.
ಇನ್ ಸ್ಟಾ ಗ್ರಾಮ್ ಮೂಲಕ ಗ್ರಾಹಕರಿಗೆ ಗಾಳ ಹಾಕ್ತಿದ್ದ ಆರೋಪಿಗಳು 25 ಸಾವಿರ ಅಸಲಿ ನೋಟು ಕೊಟ್ರೆ ಒಂದು ಲಕ್ಷ ನಕಲಿ ನೋಟುಗಳನ್ನ ನೀಡಿ ಅಕ್ರಮವೆಸಗಿರೋದು ತನಿಖೆ ವೇಳೆ ಪತ್ತೆಯಾಗಿದೆ. ತಮಿಳುನಾಡು ಮೂಲದ ಶರವಣನ್, ಕೇರಳದಾ ದೇವನ್ ಹಾಗೂ ನಿತಿನ್ ಈ ಖೋಟಾ ನೋಟಿನ ಪ್ರಮುಖ ಆರೋಪಿಗಾಳಾಗಿದ್ದಾರೆ. ಜನನಿಬಿಡ ಪ್ರದೇಶಗಲಾದ ರೈಲ್ವೇ ಸ್ಟೇಷನ್ ಹಾಗೂ ಬಸ್ ಸ್ಟಾಂಡ್ ನಲ್ಲಿ ಆರೋಪಿಗಳು ಖೊಟಾ ನೋಟು ಎಕ್ಸ್ ಚೇಂಜ್ ಮಾಡ್ತಿದ್ರು.ಎಲ್ಲವನ್ನೂ ಇನ್ಸ್ತಾಗ್ರಾಮ್ ಮೂಲಕವೇ ವ್ಯವಹರಿಸುತಿದ್ದ ಆರೋಪಿ ಶರವಣನ್ ಬಿಹಾರಕ್ಕೆ ತೆರಳಿ 10 ಲಕ್ಷ ನೋಟಿಗೆ 3 ಲಕ್ಷ ಅಸಲಿ ನೋಟು ನೀಡಿ ಬೆಂಗಳೂರಿಗೆ ತಂದಿದ್ದ.ಬಳಿಕ ಬೆಂಗಳೂರಿನಲ್ಲಿ 4 ಸಾವಿರ ಅಸಲಿ ನೋಟಿಗೆ 10 ಸಾವಿರ ಖೋಟಾ ನೋಡು ನೀಡುತಿದ್ದ.
ಸದ್ಯ ಈತನಿಂದ ನಕಲಿ ನೋಟು ಪಡೆದ ಮತ್ತಿಬ್ಬರು ಕೇರಳ ಮೂಲದ ಆರೋಪಿಗಳ ಬಂಧನ ಆಗಿದ್ದು ಆರೋಪಿಗಳಿಂದ ಸುಮಾರು 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಖೋಟಾ ನೋಟುಗಳನ್ನ ಸೀಜ್ ಮಾಡಿದ್ದಾರೆ.