Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ...!

ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ...!
bangalore , ಬುಧವಾರ, 19 ಜುಲೈ 2023 (18:17 IST)
ಸಿಸಿಬಿ ಪೊಲೀಸರಿಗೆ ಅದೊಂದು ಮಾಹಿತಿ ಬಂದಿತ್ತು. ಕೇಂದ್ರದ ತನಿಖಾ ಸಂಸ್ಥೆಯ ಅದೊಂದೇ ಒಂದು ಇನ್ಫಾರ್ಮೇಶನ್ ಇಡೀ ಬೆಂಗಳೂರನ್ನೇ ಇಂದು ಸೇಫ್ ಮಾಡಿದೆ.. ಬೆಂಗಳೂರನ್ನ ಟಾರ್ಗೆಟ್ ಮಾಡಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಐವರು ಶಂಕಿಯ ಉಗ್ರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.. ಆರ್ ಟಿ ನಗರ, ಹೆಬ್ಬಾಳ, ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿದ್ದ ಸುಹೇಲ್, ಉಮರ್, ಜಾಹಿದ್, ಮುದಾಸಿರ್, ಫೈಜರ್ ಎಂಬ ಐವರು ಶಂಕಿತ ಉಗ್ರರನ್ನ ಸಿಸಿಬಿ ಟೀಂ ಬಂಧಿಸಿದೆ.

ಹಲವು ತಿಂಗಳುಗಳಿಂದ ಬೆಂಗಳೂರು ನಗರದಲ್ಲಿ ವಿದ್ವಂಸಕ ಕೃತ್ಯ ನಡೆಸೋಕೆ ತಯಾರಿ ನಡೆಸಿದ್ದ ಶಂಕಿತರ ಬಗ್ಗೆ ಇಂಟಲಿಜೆನ್ಸ್ ಬ್ಯೂರೋಗೆ ಮಾಹಿತಿ ಹೋಗಿತ್ತು.. ಈ ಬಗ್ಗೆ ಮಾಹಿತಿ ಬಂದಿದ್ದೇ ತಡ ಅಲರ್ಟ್ ಆಗಿದ್ದ ಸಿಸಿಬಿ ಸ್ಪೆಷಲ್ ಬ್ಯೂರೋ ಐವರು ಶಂಕಿತರ ಮನೆಗಳ ಮೇಲೆ‌ ದಾಳಿ ಮಾಡಿ ಅವ್ರನ್ನ ಬಂಧಿಸಿದ್ದಾರೆ.. ಆರೋಪಿಗಳ ಮನೆಯಲ್ಲಿ 7ಕಂಟ್ರಿಮೇಡ್ ಪಿಸ್ತೂಲ್, 45ಜೀವಂತ ಗುಂಡುಗಳು, 12ಮೊಬೈಲ್, ವಾಕಿಟಾಕ್ ಸೆಟ್ ಡ್ರ್ಯಾಗರ್ ಗಳು ಪತ್ತೆಯಾಗಿವೆ.. ಶಂಕಿತರು ಸಿಕ್ಕ ತಕ್ಷಣವೇ ಶಂಕಿತರ ಹಿಸ್ಟರಿ, ಇವ್ರ ಟೀಂ ಲೀಡರ್ ಬಗ್ಗೆ ಬಾಯಿ ಬಿಡಿಸಿದಾಗ ಗೊತ್ತಾಗಿದ್ದು ಸ್ಪೋಟಕ ವಿಚಾರ.. ಜುನೈದ್ ಅಹ್ಮದ್ ಎಂಬ ಆರ್ ಟಿ ನಗರ ರೌಡಿಶೀಟರ್ ಈ ಟೀಂ ಲೀಡರ್ ಅಂತಾ ಗೊತ್ತಾಗಿದ್ದು 2008ರ ಸೀರಿಯಲ್ ಬಾಂಬ್ ಬ್ಲಾಸ್ಟ್ ಕೇಸ್ ನ ಶಂಕಿತ ನಾಸಿರ್ ಈ ಟೀಂನ ಮಾಸ್ಟರ್ ಮೈಂಡ್ ಅನ್ನೋದು ಶಂಕಿತರ ವಿಚಾರಣೆ ವೇಳೆ ಗೊತ್ತಾಗಿದೆ.

2018ರಲ್ಲಿ ಮೂವರನ್ನ ಕಿಡ್ನಾಪ್ ಮಾಡಿ ಓವರನ್ನ ಮರ್ಡರ್ ಜೈಲಿಗೆ ಹೋಗಿದ್ದ ಜುನೈದ್ ಗೆ ಜೈಲಿನಲ್ಲಿ ಶಂಕಿತ ಉಗ್ರ ನಾಸೀರ್ ಪರಿಚಯ ಆಗಿತ್ತು.. ಆಗಾಗ ಮಾತಾಡುತ್ತಾ ಶಂಕಿತನ ಕೈಯಾಳು ಆಗಿ ಪರಿವರ್ತನೆ ಆಗಿದ್ದ ಜುನೈದ್ ತನ್ನ ಟೀಂನ್ನ ರೆಡಿ ಮಾಡಿದ್ದ ಜುನೈದ್ ಜಾಮೀನು ಪಡೆದು ಹೊರ ಬಂದವನೇ ತಾನು ದುಬೈಗೆ ಹಾರಿ ಅಲ್ಲಿಂದಲೇ ಬೆಂಗಳೂರಿನಲ್ಲಿದ್ದ ಐವರೂ ಶಂಕಿತರನ್ನ ವಿದ್ವಂಸಕ ಕೃತ್ಯಕ್ಕೆ ತಯಾರು ಮಾಡಿದ್ದ.. ದುಬೈನಿಂದ ವೆಪನ್ ಗಳು, ಮದ್ದು ಗುಂಡುಗಳು, ಗ್ರೆನೈಡ್ ಗಳು ಕಳಿಸಿ ಬೆಂಗಳೂರಿನಲ್ಲಿ ಸ್ಫೋಟಿಸೋಕೆ ಎಲ್ಲಾ ಪ್ಲಾನ್ ಮಾಡಿಕೊಂಡಿದ್ದ ಅಂತಾ ತನಿಖೆ ವೇಳೆ ಗೊತ್ತಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಂಚಾರಿ ಪೊಲೀಸರ ಜೀವಕ್ಕೆ ಕುತ್ತು ತರ್ತಿದೀಯಾ ಬಾಡಿ ವಾರ್ನ್ ಕ್ಯಾಮೆರಾ?