Select Your Language

Notifications

webdunia
webdunia
webdunia
webdunia

ಸಿಲಿಕಾನ್ ಸಿಟಿಯಲ್ಲಿ ‌ಶಂಕಿತ ಉಗ್ರರ ಮೆಗ ಪ್ಲಾನ್ ಬ್ಲಾಸ್ಟ್ ಮಾಡಿದ ಸಿಸಿಬಿ

ಸಿಲಿಕಾನ್ ಸಿಟಿಯಲ್ಲಿ ‌ಶಂಕಿತ ಉಗ್ರರ ಮೆಗ ಪ್ಲಾನ್ ಬ್ಲಾಸ್ಟ್ ಮಾಡಿದ ಸಿಸಿಬಿ
bangalore , ಬುಧವಾರ, 19 ಜುಲೈ 2023 (16:30 IST)
ಮತ್ತೆ ಸಿಲಿಕಾನ್‌ ಸಿಟಿ ಉಗ್ರರ ಸ್ಲೀಪರ್ ಸೆಲ್ ಆಗ್ತಿದ್ಯಾ ಅನ್ನೋ ಅನುಮಾನ ಗಳು ದಟ್ಟವಾಗುತ್ತಿವೆ. ಸಿಲಿಕಾನ್ ಸಿಟಿಯಲ್ಲಿ ಮೆಗಾ ಬ್ಲಾಸ್ಟ್ ಮಾಡಲು ಮಾಡಿದ್ದ ಸಂಚನ್ನೂ ಸಿಸಿಬಿ ಪೋಲಿಸರು ‌ಉಡೀಸ್ ಮಾಡಿದ್ದಾರೆ.
 
ಕೇಂದ್ರ ಗುಪ್ತಚರ ಮಾಹಿತಿ‌‌ ಮೇರಗೆ ಬೆಂಗಳೂರಲ್ಲಿ ಐವರು ಶಂಕಿತ ಉಗ್ರರು ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಕನಕನಗರ ಬಳಿಯ ಸುಲ್ತಾನ್ ಪಾಳ್ಯ ಮಸೀದಿ ಬಳಿ ಟೆರರ್ ಮೀಟಿಂಗ್ ವೇಳೆ ಆರೋಪಿಗಳು ಸಿಸಿಬಿ ಬಲಗೆ ಬಿದ್ದಿದ್ದಾರೆ. 2017ರಲ್ಲಿ ಆರ್ ಟಿ ನಗರದ ನೂರ್ ಕೊಲೆ ಕೇಸ್ನಲ್ಲಿ ಬಂಧನವಾಗಿದ್ದ ಆರೋಪಿಗಳ ಪೈಕಿ ಐವರು ಟೆರರ್ ಲಿಂಕ್ ಪಡೆದಿದ್ರು ಎಂದು ಹೇಳಲಾಲಗ್ತಿದೆ. ಕೊಲೆ ಪ್ರಕರದ ಪ್ರಮುಖ ಆರೋಪಿ ಜುನೈದ್ ಸದ್ಯ ತಲೆ‌ಮರೆಸಿಕೊಂಡಿದ್ದು ಇವನ  ಸಹಚರರಾಗಿರೋ‌  ಸುಹೈಲ್, ಉಮರ್, ತಬ್ರೇಜ್, ಮುದಾಸಿರ್ ಮತ್ತು ಫೈಜಲ್ ರಬ್ಬಾನಿ ಬಂಧಿತ ಆರೋಪಿಗಳಾಗಿದ್ದಾರೆ. 
 
ಇನ್ನು ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದಾಗ 2008ರ ಬೆಂಗಳೂರು ಸಿರಿಯಲ್ ಬಾಂಬ್ ಬ್ಲಾಸ್ಟ್ ಕೇಸ್ ನ ರುವಾರಿ ನಾಸೀರ್  ಸಂಪರ್ಕದಲ್ಲಿದ್ದ ಜುನೈದ್ ಉಗ್ರ ಚಟುವಟಿಕೆ ಆಸಕ್ತಿ ತೋರಿ ನಾಸೀರ್ ಹೇಳಿದಂತೆ ವಿದ್ವಾಂಸಕ‌ ಕೃತ್ಯ ನಡೆಸಲು ತಯಾರಿ ನಡೆಸಿದ್ನಂತೆ. ಅಲ್ಲದೆ ಕೊಲೆ ಕೇಸ್ ನಲ್ಲಿ ಬೇಲ್ ಮೇಲೆ ಹೊರ ಬಂದ ನಾಸೀರ್ ಮತ್ತೆ ಕೋರ್ಟ್ ಗೆ ಹಾಜರಾಗದೆ ತಲೆ‌ಮರೆಸಿಕೊಂಡಿದ್ದಾ. ದೂರದಲ್ಲೆ ಕುಳಿತು ಜುನೈದ್ ತನ್ನ ಸ್ನೇಹಿತರನ್ನ ಉಗ್ರ ಚಟುವಟಿಕೆ ಟ್ರೈನಿಂಗ್ ಕೊಡ್ತಿದ್ನಂತೆ. ಇನ್ನೂ ಸಿಸಿಬಿ ಪೊಲೀಸ್ರು ಆರೋಪಿಗಳ ಬಂಧನಕ್ಕೆ ತೆರಳಿದಾಗ ಸುಹೈಲ್ ಮನೆಯಲ್ಲಿ ಉಗ್ರಚಟುವಟಿಕೆ ಸಂಬಂಧಿಸಿದ ಮೀಟಿಂಗ್ ಮಾಡ್ತಿದ್ರು ಎಂದು ತಿಳಿದು ಬಂದಿದೆ. ಇನ್ನೂ ಆರೋಪಿಗಳ ಬಳಿ   ಸಿಕ್ಕಿರೋ ವಸ್ತುಗಳನ್ನ ನೋಡಿ ಸಿಸಿಬಿ ಪೊಲೀಸ್ರೆ ಶಾಕ್ ಆಗಿದ್ದಾರೆ
 
*7 ಕಂಟ್ರಿ ಮೇಡ್ ಪಿಸ್ತೂಲ್
*42ಜೀವಂತ ಗುಂಡುಗಳು
*ಎರಡು ಸ್ಯಾಟಲೈಟ್ ಫೋನ್ ಮಾದರಿ ವಾಕಿಟಾಕಿ
*ಮೊಬೈಲ್ ಫೋನ್ ಮತ್ತು ವಿವಿಧ ಕಂಪನಿ ಸಿಮ್ ಗಳು
*ಲ್ಯಾಪ್ ಟಾಪ್
 
ಇನ್ನೂ ಆರೋಪಗಳು ಗ್ರನೇಡ್ ಮಾದರಿ ವಸ್ತುಗಳನ್ನ ಶೇಖರಿಸಿರೋ ಮಾಹಿತಿ ಕೂಡ ಇದೆ. ಬೆಂಗಳೂರಲ್ಲಿ 2008ಸಿರಿಯಲ್ ಬ್ಲಾಸ್ಟ್ ಗಿಂತ ದೊಡ್ಡ ಮಟ್ಟದ ವಿದ್ವಂಸಕ ಕೃತ್ಯಕ್ಕೆ ಶಂಕಿತರು ತಯಾರಿ ನಡೆಸಿದ್ರು ಅನ್ನೋ ಆರೋಪ ಕೇಳಿ ಬಂದಿದೆ. ಸದ್ಯ ಇವ್ರು ಯಾರು ಹಣ ಸಹಾಯ ಮಾಡ್ತಿದ್ರು ಯಾರ‌ ಸಂಪರ್ಕದಲ್ಲಿದ್ರು. ಇವ್ರ ತಂಡದಲ್ಲಿ ಇನ್ನೂ ಎಷ್ಟು ಜನ ಇದ್ರು ಅನ್ನೊದು ತನಿಖೆಯಿಂದ ಗೊತ್ತಾಗಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಇರಲಿ ಎಚ್ಚರ