Select Your Language

Notifications

webdunia
webdunia
webdunia
webdunia

ಬೆಂಗಳೂರಲ್ಲಿ ಮತ್ತಷ್ಟು ಸಂಚರಿಸಲಿವೆ ಇವಿ ಬಸ್

ಬೆಂಗಳೂರಲ್ಲಿ ಮತ್ತಷ್ಟು ಸಂಚರಿಸಲಿವೆ ಇವಿ ಬಸ್
ಬೆಂಗಳೂರು , ಶುಕ್ರವಾರ, 28 ಜುಲೈ 2023 (13:57 IST)
ಬೆಂಗಳೂರು : ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಬಿಎಂಟಿಸಿ ವಿದ್ಯುತ್ ಚಾಲಿತ ಬಸ್ ಗಳತ್ತ ಮುಖ ಮಾಡಿದೆ. ಸಂಸ್ಥೆ JBM ಹಾಗೂ ಅಶೋಕ್ ಲೇ ಲ್ಯಾಂಡ್ ಕಂಪನಿಯಿಂದ ಈಗಾಗಲೆ 390 ಬಸ್ಗಳನ್ನು ಖರೀದಿಸಿದೆ.
 
ಇದೀಗ ಬಿಎಂಟಿಸಿ ಮೊದಲ ಬಾರಿಗೆ ಟಾಟಾ ಕಂಪನಿಯಿಂದ 921 ಇವಿ ಬಸ್ಗಳನ್ನು ಖರೀದಿಸಿ ರಸ್ತೆಗೆ ಇಳಿಸುತ್ತಿದೆ. ಇಂದು (ಜು.28) ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಈ ಬಸ್ಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಸಿರು ನಿಶಾನೆ ತೋರಿಸಲಿದ್ದಾರೆ.

ಫೇಮ್ 2 ಯೋಜನೆಯಡಿ 921 ಬಸ್ಗಳನ್ನು ಖರೀದಿಸಲಾಗಿದ್ದು, ಮುಂದಿನ ಮೂರು ತಿಂಗಳಿನಲ್ಲಿ ನಗರದ ರಸ್ತೆಗಳಲ್ಲಿ ಸಂಚರಿಸಲಿವೆ. ಈ ಮೂಲಕ ಸಂಸ್ಥೆ ಒಟ್ಟು 1,311 ಎಲೆಕ್ಟ್ರಿಕ್ ಬಸ್ಗಳನ್ನು ಹೊಂದಿದಂತಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್