Publish Date: Fri, 14 Jul 2023 (08:55 IST)
Updated Date: Fri, 14 Jul 2023 (09:57 IST)
ಎಲ್ಲವೂ ಅಂದುಕೊಂಡಂತೇ ನಡೆದರೆ, ಆ್ಯಪಲ್ ಐಫೋನ್ ಅನ್ನು ತಯಾರಿಸುವ ಪ್ರಮುಖ ಮತ್ತು ಕೆಲವೇ ಕಂಪನಿಗಳಲ್ಲಿ ಟಾಟಾ ಕೂಡ ಒಂದಾಗಲಿದೆ.
ಜತೆಗೇ, ಕರ್ನಾಟಕದಲ್ಲೇ ಮೊದಲ ಘಟಕವನ್ನು ಟಾಟಾ ತನ್ನದಾಗಿಸಿಕೊಂಡು, ಆ್ಯಪಲ್ ಐಫೋನ್ ತಯಾರಿಸಲಿದೆ. ಕೋಲಾರದಲ್ಲಿರುವ ವಿಸ್ಟ್ರಾನ್ ಕಂಪನಿಯ ಐಫೋನ್ ಅಸೆಂಬ್ಲಿಂಗ್ ಘಟಕವನ್ನು ಖರೀದಿಸಲಿರುವ ಟಾಟಾ ಸಂಸ್ಥೆ, ಮುಂದಿನ ತಿಂಗಳೇ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.
ಖರೀದಿಸಿದ ಬಳಿಕ ಟಾಟಾ ಸಂಸ್ಥೆ ಐಫೋನ್ ತಯಾರಿಕೆಯ ಕೆಲಸ ಮುಂದುವರಿಸಿಕೊಂಡು ಹೋಗಲಿದೆ. ಈ ಒಪ್ಪಂದ ಯಶಸ್ವಿಯಾದರೆ ಐಫೋನ್ ತಯಾರಿಸುವ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆ ಟಾಟಾ ಸಂಸ್ಥೆಯದ್ದಾಗುತ್ತದೆ.