Select Your Language

Notifications

webdunia
webdunia
webdunia
webdunia

ಜುಲೈ 27ರಂದು ಬಂದ್ ಆಗುತ್ತಾ ಬೆಂಗಳೂರು?

ಜುಲೈ 27ರಂದು ಬಂದ್ ಆಗುತ್ತಾ ಬೆಂಗಳೂರು?
ಬೆಂಗಳೂರು , ಮಂಗಳವಾರ, 25 ಜುಲೈ 2023 (13:03 IST)
ಬೆಂಗಳೂರು : ಇದೇ 27ಕ್ಕೆ ಆಟೋ, ಟ್ಯಾಕ್ಸಿ, ಕ್ಯಾಬ್ ಹಾಗೂ ಖಾಸಗಿ ಬಸ್ ಸಂಘಟನೆಗಳು ಬಂದ್ಗೆ ಕರೆಕೊಟ್ಟಿವೆ. ಸರ್ಕಾರದ ಶಕ್ತಿಯೋಜನೆಯಿಂದ ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳು ಆರೋಪಿಸಿವೆ. ಹೀಗಾಗಿ ಸರ್ಕಾರ ಸಂಘಟನೆಗಳ ಮನವೊಲಿಕೆಗೆ ಮುಂದಾಗಿದೆ.

ಸರ್ಕಾರದ ಶಕ್ತಿಯೋಜನೆ ಅದ್ಭುತವಾಗಿ ಯಶಸ್ಸು ಕಂಡಿದೆ. ಇದರಿಂದ ಪ್ರತಿಕೂಲ ಪರಿಣಾಮ ಎದುರಿಸುತ್ತಿರುವ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಮಾಲೀಕರು ಇದೀಗ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಈ ಹಿನ್ನೆಲೆ ಜುಲೈ 27ಕ್ಕೆ 23 ಸಂಘಟನೆಗಳು ಸೇರಿದ ಖಾಸಗಿ ಸಾರಿಗೆ ಒಕ್ಕೂಟ ಸಾಮೂಹಿಕವಾಗಿ ಬಂದ್ ಆಚರಸಿ ಸರ್ಕಾರಕ್ಕೆ ಪ್ರತಿರೋಧ ಒಡ್ಡಲು ಮುಂದಾಗಿದೆ. ಜುಲೈ 27ಕ್ಕೆ ಬೆಂಗಳೂರಲ್ಲಿ ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್ ಗಳನ್ನು ರಸ್ತೆಗೆ ಇಳಿಸದೆ ಮುಷ್ಕರ ಮಾಡಲು ಮುಂದಾಗಿತ್ತು. ಆದರೆ ಇದರ ಮಹತ್ವ ಅರಿತುಕೊಂಡಿರುವ ಸರ್ಕಾರ ಖಾಸಗಿ ಸಾರಿಗೆ ಒಕ್ಕೂಟಗಳ ಮನವೊಲಿಕೆಗೆ ಮುಂದಾಗಿದೆ.

ಖಾಸಗಿ ಸಾರಿಗೆ ಇಲಾಖೆ ಜುಲೈ 27ಕ್ಕೆ ಬಂದ್ಗೆ ಕರೆ ಕೊಟ್ಟಿರುವ ಹಿನ್ನೆಲೆ ಇಂದು ಸಾರಿಗೆ ಇಲಾಖೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಭೆ ಕರೆದಿದ್ದಾರೆ. ಇಂದಿನ ಸಭೆಯಲ್ಲಿ ಬಂದ್ಗೆ ಕರೆ ಹಾಗೂ ಬೆಂಬಲ ಕೊಟ್ಟಿರುವ ಸಂಘಟನೆಗಳ ಆಹವಾಲು ಸ್ವೀಕರಿಸಲಿದ್ದು, ಆಗುತ್ತಿರುವ ಅನಾನೂಕಲಗಳನ್ನು ಆಲಿಸಲಿದ್ದಾರೆ.ಒಂದು ವೇಳೆ ಇಂದಿನ ಸಭೆ ಯಶಸ್ವಿಯಾದರೆ ಬಂದ್ ವಾಪಾಸ್ ಪಡೆಯುವ ಸಂಭವವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಿಮ್ ಪ್ರಿಯರೇ ಹುಷಾರ್ ! ಜಿಮ್ ಛಾವಣಿ ಕುಸಿತದಿಂದ 10 ಮಂದಿ ದುರ್ಮರಣ