Select Your Language

Notifications

webdunia
webdunia
webdunia
webdunia

ಜಿಮ್ ಪ್ರಿಯರೇ ಹುಷಾರ್ ! ಜಿಮ್ ಛಾವಣಿ ಕುಸಿತದಿಂದ 10 ಮಂದಿ ದುರ್ಮರಣ

ಜಿಮ್ ಪ್ರಿಯರೇ ಹುಷಾರ್ ! ಜಿಮ್ ಛಾವಣಿ ಕುಸಿತದಿಂದ 10 ಮಂದಿ ದುರ್ಮರಣ
ಬೀಜಿಂಗ್ , ಗುರುವಾರ, 27 ಜುಲೈ 2023 (13:50 IST)
ಬೀಜಿಂಗ್ : ಜಿಮ್ ಛಾವಣಿ ಕುಸಿದು ಬಿದ್ದ ಪರಿಣಾಮ 10 ಮಂದಿ ದಾರುಣವಾಗಿ ಮೃತಪಟ್ಟು, ಓರ್ವ ಅವಶೇಷಗಳಡಿಯಲ್ಲಿ ಸಿಲುಕಿಕೊಂಡ ಘಟನೆ ಚೀನಾದಲ್ಲಿ ನಡೆದಿದೆ.

ಸೋಮವಾರ ಮುಂಜಾನೆ 5:30ರ ಸುಮಾರಿಗೆ ಈ ಘಟನೆ ನಡೆದಿದು, 14 ಮಂದಿಯನ್ನು ಅವಶೇಷಗಳಡಿಯಿಂದ ಹೊರತೆಗೆಯಲಾಗಿದೆ. ಇದರಲ್ಲಿ ಆರು ಮಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ನಡೆದ ತಕ್ಷಣ ಅಗ್ನಿಶಾಮಕದ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುಮಾರು 160 ಅಗ್ನಿಶಾಮಕ ಸಿಬ್ಬಂದಿ ಮತ್ತು 39 ಅಗ್ನಿಶಾಮಕ ಟ್ರಕ್ಗಳು ಸ್ಥಳದಲ್ಲಿದ್ದವು. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಭಾರೀ ಮಳೆ ಬಿದ್ದಾಗ ಛಾವಣಿ ಕುಸಿದಿದೆ. ಹೀಗಾಗಿ ಕಟ್ಟಡ ನಿರ್ಮಾಣ ಮಾಡಿದ ಉಸ್ತುವಾರಿಯನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ