Publish Date: Fri, 05 May 2023 (06:50 IST)
Updated Date: Fri, 05 May 2023 (07:02 IST)
ನವದೆಹಲಿ: ರಸ್ತೆ ಅಪಘಾತದಿಂದಾಗಿ ಸದ್ಯಕ್ಕೆ ಕ್ರಿಕೆಟ್ ನಿಂದ ದೂರವಿರುವ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ಈಗ ಚೇತರಿಕೆಯ ಹಾದಿಯಲ್ಲಿದ್ದಾರೆ.
ಕಾಲಿಗೆ ಪೆಟ್ಟು ಮಾಡಿಕೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ರಿಷಬ್ ಇದೀಗ ನಡೆಯುತ್ತಿರುವ ಐಪಿಎಲ್, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್, ಏಕದಿನ ವಿಶ್ವಕಪ್ ನಿಂದಲೂ ಹೊರಗುಳಿಯಲಿದ್ದಾರೆ. ಸದ್ಯಕ್ಕೆ ಊರುಗೋಲಿನ ಸಹಾಯದಿಂದ ನಡೆದಾಡುತ್ತಿರುವ ರಿಷಬ್ ಈಗ ಜಿಮ್ ಗೆ ಆಗಮಿಸಿದ್ದಾರೆ.
ಜಿಮ್ ನಲ್ಲಿ ಲಘು ಅಭ್ಯಾಸ ನಡೆಸಲು ಬಂದ ರಿಷಬ್ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವರ್ಷದ ಅಂತ್ಯಕ್ಕೆ ಅವರು ಚೇತರಿಸಿಕೊಳ್ಳುವ ವಿಶ್ವಾಸವಿದೆ.