Select Your Language

Notifications

webdunia
webdunia
webdunia
webdunia

ಮುಖ್ಯಶಿಕ್ಷಕರ, ಶಿಕ್ಷಕರ ಬಡ್ತಿಗಾಗಿ ಕೌನ್ಸ್ ಲಿಂಗ್ ಶುರು

ಮುಖ್ಯಶಿಕ್ಷಕರ, ಶಿಕ್ಷಕರ ಬಡ್ತಿಗಾಗಿ ಕೌನ್ಸ್ ಲಿಂಗ್ ಶುರು
ಕಲಬುರಗಿ , ಬುಧವಾರ, 4 ಮಾರ್ಚ್ 2020 (21:09 IST)
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಅರ್ಹ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ವೃಂದದ ನೌಕರರಿಗೆ ಬಡ್ತಿಗಾಗಿ ಕೌನ್ಸಲಿಂಗ್ ಶುರುವಾಗಿದೆ.

ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಅರ್ಹ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ವೃಂದದ ನೌಕರರಿಗೆ, ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ಗ್ರೂಪ್-ಬಿ ವೃಂದದ ಹುದ್ದೆಗಳಿಗೆ ಬಡ್ತಿ ನೀಡಲು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರ ಕಚೇರಿಯಲ್ಲಿ ಮಾರ್ಚ್ 6 ರಂದು ಬೆಳಿಗ್ಗೆ 11 ಗಂಟೆಗೆ ಕೌನ್ಸ್‍ಲಿಂಗ್ ನಡೆಯಲಿದೆ. ಹೀಗಂತ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ನಲಿನ್ ಅತುಲ್ ತಿಳಿಸಿದ್ದಾರೆ.

ಅರ್ಹ ಶಿಕ್ಷಕರು ಸಂಬಂಧಪಟ್ಟ ಮೂಲ ದಾಖಲೆಗಳು ಹಾಗೂ ಝೆರಾಕ್ಸ್ ದೃಢೀಕೃತ ಪ್ರತಿಗಳೊಂದಿಗೆ ಅಂದು ನಿಗದಿತ ಸಮಯಕ್ಕೆ ತಪ್ಪದೇ ಕೌನ್ಸಲಿಂಗ್‍ಗೆ ಹಾಜರಾಗಬೇಕೆಂದು ಅವರು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವೈರಸ್ ಭೀತಿ ಬೇಡ : ಕೋಳಿ, ಮಾಂಸ ಬಿಂದಾಸ್ ಆಗಿ ತಿನ್ನಿ ಎಂದ ಸಚಿವ