Select Your Language

Notifications

webdunia
webdunia
webdunia
webdunia

ಕೊರೊನಾ ಗೆದ್ದ 96 ವರ್ಷದ ವೃದ್ಧೆ ಮನೆಯಲ್ಲಿ ಸಂಭ್ರಮ

ಕೊರೊನಾ ಗೆದ್ದ 96 ವರ್ಷದ ವೃದ್ಧೆ ಮನೆಯಲ್ಲಿ ಸಂಭ್ರಮ
ಚಿತ್ರದುರ್ಗ , ಬುಧವಾರ, 8 ಜುಲೈ 2020 (17:02 IST)
ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ 96 ವರ್ಷದ ವೃದ್ಧೆಯೊಬ್ಬಳು ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದು, ಕೋವಿಡ್ – 19 ಸವಾಲು ಹಾಕಿದ್ದಾಳೆ.

ಕೋವಿಡ್ ಸೋಂಕು ತಗುಲಿ ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ 96 ವರ್ಷದ ವಯೋವೃದ್ಧೆ ಮನೆಯಲ್ಲಿ ಸಂಭ್ರಮ, ಸಡಗರ ಮನೆ ಮಾಡಿದೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ವಯೋವೃದ್ಧೆ ಗೋವಿಂದಮ್ಮ(96) ಅವರು ಕೊರೊನಾ ವೈರಸ್‌ ಗೆದ್ದು ಮರಳಿ ಮನೆಗೆ ವಾಪಸ್ ಬಂದಿದ್ದಾರೆ.

ಹಿರಿಯೂರು ನಗರದಲ್ಲಿ ನಿವಾಸಿ ಗೋವಿಂದಮ್ಮನವರಿಗೆ ಕೋವಿಡ್ ಸೋಂಕು ದೃಢ ಪಟ್ಟಿತ್ತು. ಚಿತ್ರದುರ್ಗ ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದಾರೆ. ಕೊರೊನಾ ಸೋಂಕು ಗೆದ್ದು ಬಂದ ಕರ್ನಾಟಕದ ಎರಡನೆಯ ಅತ್ಯಂತ ಹಿರಿಯರು ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯಲು ಹಣ ಕೊಡದಕ್ಕೆ ನೀಚ ಕೆಲಸ ಮಾಡಿದ ಯುವಕ