ಕೊರೊನಾ ಕೇಸ್ ಗಳು ಹೆಚ್ಚಾಗುವುದನ್ನು ತಡೆಗಟ್ಟಲು ಈ ಜಿಲ್ಲಾ ಕೇಂದ್ರದ ಜನರು ಅರ್ಧದಿನದ ಲಾಕ್ ಡೌನ್ ಗೆ ಸ್ವಯಂ ಮುಂದಾಗಿದ್ದಾರೆ.
ಕೊಪ್ಪಳ ನಗರದಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 2 ರವರೆಗೆ ಲಾಕ್ ಡೌನ್ ಜಾರಿಯಲ್ಲಿ ಇರಲಿದೆ.
ಜುಲೈ 8 ರಿಂದ ಜುಲೈ 25 ರವರೆಗೆ ಅರ್ಧ ದಿನದ ಲಾಕ್ ಡೌನ್ ಜಾರಿಯಾಗಲಿದೆ.
ವ್ಯಾಪಾರಸ್ಥರು ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ನಗರಸಭೆ ಪೌರಾಯುಕ್ತ ಮಂಜುನಾಥ ತಳವಾರ ಪಾಲ್ಗೊಂಡು ಈ ನಿರ್ಧಾರ ಪ್ರಕಟಿಸಿದ್ದಾರೆ.