Publish Date: Mon, 27 Jul 2020 (19:31 IST)
Updated Date: Mon, 27 Jul 2020 (19:33 IST)
ರಾಷ್ಟ್ರ ಹಾಗೂ ರಾಜ್ಯದ ಜನತೆ ಕೊರೊನಾ ವೈರಸ್ ನಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದರೆ, ಬಿಜೆಪಿ ಅಧಿಕಾರ ಉಳಿಸಿಕೊಳ್ಳೋಕೆ ಮುಂದಾಗಿದೆ ಎಂದು ಮಾಜಿ ಸಿಎಂ ಫುಲ್ ಗರಂ ಆಗಿದ್ದಾರೆ.
ಬಿಜೆಪಿಯ 24 ಶಾಸಕರಿಗೆ, ಸರಕಾರದ ಒಂದು ವರ್ಷದ ಪೂರೈಸಿದ ಸಂದರ್ಭದಲ್ಲಿ ನಿಗಮ, ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.
ಬಿಜೆಪಿ ಸರಕಾರದ ನಡೆ ವಿರುದ್ಧ ಟ್ವಿಟ್ ಮಾಡಿರುವ ಹೆಚ್.ಡಿ.ಕೆ., ಶಾಸಕರಿಗೆ ಉಡುಗೊರೆ, ಜನತೆಗೆ ಬಿಜೆಪಿ ಬರೆ ನೀಡಿದೆ ಎಂದು ವ್ಯಂಗ್ಯವಾಡಿದ್ದಾರೆ.