Publish Date: Mon, 27 Jul 2020 (15:14 IST)
Updated Date: Mon, 27 Jul 2020 (15:16 IST)
ಬಿಜೆಪಿಗೆ ಸರಕಾರಕ್ಕೆ ಒಂದು ವರ್ಷದ ತುಂಬಿದ ಸಂಭ್ರಮ ಇದ್ದರೆ, ಕಾಂಗ್ರೆಸ್ ಟೀಕಾಸ್ತ್ರ ಮುಂದುವರಿಸಿದೆ.
ಮಂತ್ರಿಮಂಡಲ ರಚನೆ ಇಲ್ಲದೆ, ಸಂತ್ರಸ್ತರಿಗೆ ಪರಿಹಾರ ಕೊಡದೇ, ಉಪ ಚುನಾವಣೆ ಮಂತ್ರಿ ಮಂಡಲ ವಿಸ್ತರಣೆ ಕಸರತ್ತು, ಮಂತ್ರಿಗಿರಿ ಹಗ್ಗಜಗ್ಗಾಟದಂತಹ ಆಟಗಳಲ್ಲಿಯೇ ಒಂದು ವರ್ಷ ಪೂರೈಸಿದೆ ಎಂದು ವ್ಯಂಗ್ಯವಾಡಿದ್ದಾರೆ.
ಪ್ರಜಾಪ್ರಭುತ್ವವನ್ನು ಆಪರೇಷನ್ ಕಮಲದ ಮೂಲಕ ಕಗ್ಗೊಲೆ ಮಾಡೋಕೆ ಬಿಜೆಪಿ ಮುಂದಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಅಧಿಕಾರದ ದುರಾಸೆಯಿಂದ ಬಿಜೆಪಿ ಪಕ್ಷ 'ಅಪರೇಷನ್ ಲೋಟಸ್' ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆ ಮಾಡುತ್ತಿದೆ. ಕರ್ನಾಟಕ, ಮಧ್ಯಪ್ರದೇಶಗಳಲ್ಲಿ ಏನಾಯಿತು, ಮಹಾರಾಷ್ಟ್ರದಲ್ಲಿ ಮಧ್ಯರಾತ್ರಿ ಏನು ನಡೆಯಿತು ಎಂಬುದು ನಿಮಗೆ ತಿಳಿದಿದೆ. ಇದೀಗ ರಾಜಸ್ಥಾನದಲ್ಲಿ ಕೀಳು ರಾಜಕೀಯ ನಡೆಯುತ್ತಿದ್ದು ಇದನ್ನು ನಾವೆಲ್ಲಾ ವಿರೋಧಿಸಬೇಕಿದೆ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.