Publish Date: Mon, 27 Jul 2020 (12:42 IST)
Updated Date: Mon, 27 Jul 2020 (12:44 IST)
ಇಸ್ಲಾಮಾಬಾದ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಜಾಗತಿಕ ಕ್ರಿಕೆಟ್ ನ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರು ಎಂದೇ ಬಣ್ಣಿಸಲಾಗುತ್ತದೆ. ಆದರೆ ಪಾಕ್ ಬೌಲರ್ ಜುನೈದ್ ಖಾನ್ ಕೊಹ್ಲಿ ಎಲ್ಲರಂತೆ ಒಬ್ಬ ಸಾಮಾನ್ಯ ಬ್ಯಾಟ್ಸ್ ಮನ್ ಅಷ್ಟೇ ಎಂದಿದ್ದಾರೆ.
2012 ರಲ್ಲಿ ನಡೆದಿದ್ದ ಭಾರತ-ಪಾಕ್ ಸರಣಿಯಲ್ಲಿ ಕೊಹ್ಲಿ ವಿಕೆಟ್ ಪಡೆದಿದ್ದ ಜುನೈದ್ ಅಂದಿನ ಅನುಭವವನ್ನು ಪರಿಗಣಿಸಿ ಈ ಮಾತು ಹೇಳಿದ್ದಾರೆ.
‘ನಾನು ಅವರಿಗೆ ಎರಡು ಬಾಲ್ ಎಸೆದಾಗ ಇವರೂ ಎಲ್ಲರಂತೇ ನಾರ್ಮಲ್ ಬ್ಯಾಟ್ಸ್ ಮನ್ ಎನಿಸಿತು. ವಿರಾಟ್ ನನ್ನ ಬಳಿ ತಮಾಷೆಯಾಗಿ ಇದು ಭಾರತೀಯ ಪಿಚ್, ಇಲ್ಲಿ ಬಾಲ್ ಹೆಚ್ಚು ಮೂವ್ ಆಗಲ್ಲ ಎಂದಿದ್ದರು. ಆದರೆ ನಾನೂ ನೋಡೋಣ ಎಂದಿದ್ದೆ. ಆದರೆ ಈಗ ಕೊಹ್ಲಿ ಎಲ್ಲಾ ಮೂರೂ ಮಾದರಿ ಕ್ರಿಕೆಟ್ ನಲ್ಲಿ ಸರಾಗವಾಗಿ ರನ್ ಗಳಿಸಿ ಅತ್ಯುತ್ತಮ ಕ್ರಿಕೆಟಿಗ ಎನ್ನುವುದರಲ್ಲಿ ಸಂಶಯವಿಲ್ಲ’ ಎಂದು ಜುನೈದ್ ಹೇಳಿಕೊಂಡಿದ್ದಾರೆ.