Select Your Language

Notifications

webdunia
webdunia
webdunia
webdunia

ಸಚಿನ್ ಬಳಿಕ ಅನಿಲ್ ಕುಂಬ್ಳೆ ಟೀಂ ಇಂಡಿಯಾ ನಾಯಕನಾಗಬೇಕಿತ್ತು! ಆದರೆ ಅದು ಕೈ ತಪ್ಪಿದ್ದು ಹೇಗೆ?

ಸಚಿನ್ ಬಳಿಕ ಅನಿಲ್ ಕುಂಬ್ಳೆ ಟೀಂ ಇಂಡಿಯಾ ನಾಯಕನಾಗಬೇಕಿತ್ತು! ಆದರೆ ಅದು ಕೈ ತಪ್ಪಿದ್ದು ಹೇಗೆ?
ಮುಂಬೈ , ಗುರುವಾರ, 23 ಜುಲೈ 2020 (13:23 IST)
ಮುಂಬೈ: ಸಚಿನ್ ತೆಂಡುಲ್ಕರ್ ನಾಯಕ ಸ್ಥಾನದಿಂದ ಕೆಳಗಿಳಿದಾಗ ಟೀಂ ಇಂಡಿಯಾ ಸಾರಥ್ಯವನ್ನು ಅನಿಲ್ ಕುಂಬ್ಳೆಗೆ ವಹಿಸಿಕೊಳ್ಳಬೇಕಿತ್ತಂತೆ. ಆದರೆ ಅದು ಅನಿರೀಕ್ಷಿತವಾಗಿ ಗಂಗೂಲಿ ಪಾಲಾಯಿತು ಎಂದು ಮಾಜಿ ಆಯ್ಕೆಗಾರ ಅಶೋಕ್ ಮಲ್ಹೋತ್ರಾ ಬಹಿರಂಗಪಡಿಸಿದ್ದಾರೆ.


ಸಚಿನ್ ಪದತ್ಯಾಗ ಮಾಡಿದ ಮೇಲೆ ಅನಿಲ್ ಕುಂಬ್ಳೆ, ಜಡೇಜಾ ಸರತಿಯಲ್ಲಿದ್ದರು. ಆದರೆ ಸೌರವ್ ಗಂಗೂಲಿಯನ್ನು 200 ರಲ್ಲಿ ಅನಿರೀಕ್ಷಿತವಾಗಿ ಉಪನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಗಂಗೂಲಿ ಜಾಸ್ತಿ ಕೋಕ್ ಕುಡಿಯುತ್ತಾರೆ ಎನ್ನುವುದೇ ಅವರನ್ನು ಉಪನಾಯಕನಾಗಿ ಮಾಡಲು ತೊಡಕಾಗಿತ್ತು. ಹಾಗಿದ್ದರೂ ಕೊನೆಗೂ ಅವರನ್ನು ಉಪನಾಯಕನಾಗಿ ಮಾಡಲಾಯಿತು.

 
ಹೀಗಾಗಿ ನಾಯಕನಾಗಿ ಗಂಗೂಲಿಯನ್ನು ಆಯ್ಕೆ ಮಾಡುವಾಗಲೂ ಇಂತಹದ್ದೇ ಚರ್ಚೆಯಾಯಿತು. ನಾಯಕನ ಆಯ್ಕೆ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿದ್ದವರೂ ಬಂದು ನಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸೋಣವೆಂದು ಹೇಳಿದರು. 3-2 ವೋಟ್ ಗಂಗೂಲಿ ಪರವಾಗಿತ್ತು. ಗಂಗೂಲಿ ಅನಿರೀಕ್ಷಿತವಾಗಿ ನಾಯಕನಾಗಿ ಆಯ್ಕೆಯಾಗಿಬಿಟ್ಟರು ಎಂದು ಅಶೋಕ್ ಮಲ್ಹೋತ್ರ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇದೇ ಮೊದಲ ಬಾರಿಗೆ ಕೋಚ್ ವಿವಾದದ ಬಗ್ಗೆ ಮಾತನಾಡಿದ ಅನಿಲ್ ಕುಂಬ್ಳೆ