Publish Date: Thu, 23 Jul 2020 (12:58 IST)
Updated Date: Thu, 23 Jul 2020 (12:59 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಒಂದು ವರ್ಷ ಅಧಿಕಾರದಲ್ಲಿದ್ದ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ ನಾಯಕ ವಿರಾಟ್ ಕೊಹ್ಲಿ ಜತೆ ಹೊಂದಾಣಿಕೆ ಕೊರತೆಯಿಂದ ಪದತ್ಯಾಗ ಮಾಡಿದ್ದರು.
ಆದರೆ ಕುಂಬ್ಳೆ ಇದುವರೆಗೆ ಅದರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಆ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ.
‘ಒಂದು ವರ್ಷ ಟೀಂ ಇಂಡಿಯಾ ಕೋಚ್ ಆಗಿದ್ದು ಸ್ಮರಣೀಯ. ಒಂದು ವರ್ಷ ನಾವು ಉತ್ತಮ ಸಾಧನೆ ಮಾಡಿದ್ದೆವು. ಆದರೆ ಅದರ ಅಂತ್ಯ ಇನ್ನೂ ಚೆನ್ನಾಗಿರಬಹುದಿತ್ತು’ ಎಂದು ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.