Select Your Language

Notifications

webdunia
webdunia
webdunia
Saturday, 12 April 2025
webdunia

ಐಪಿಎಲ್ ನಲ್ಲಿ ಈ ಬಾರಿ ಎಷ್ಟು ಪಂದ್ಯಗಳಿರುತ್ತೆ? ಏನಿದೆ ಡೀಟೈಲ್ಸ್?

ಐಪಿಎಲ್ 13
ಮುಂಬೈ , ಬುಧವಾರ, 22 ಜುಲೈ 2020 (10:27 IST)
ಮುಂಬೈ: ಐಪಿಎಲ್ 13 ಆಯೋಜನೆಯಾಗುವುದು ಪಕ್ಕಾ ಆಗಿದೆ. ಆದರೆ ಫುಲ್ ಮ್ಯಾಚ್ ಇರುತ್ತಾ? ಅಥವಾ ಸಮಯದ ಅಭಾವದ ಕಾರಣ ಪಂದ್ಯಗಳನ್ನು ಕಡಿತ ಮಾಡಲಾಗುತ್ತಾ? ಇತ್ಯಾದಿ ಅನುಮಾನಗಳು ಅಭಿಮಾನಿಗಳಲ್ಲಿದೆ.


ಇದಕ್ಕೆ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್ ಉತ್ತರಿಸಿದ್ದಾರೆ. ಈ ಬಾರಿ ಐಪಿಎಲ್ ಸಂಪೂರ್ಣ ಪಂದ್ಯಗಳು ನಡೆಯಲಿವೆ. ಒಟ್ಟಾರೆ 60 ಪಂದ್ಯಗಳು ನಡೆಯಲಿವೆ. ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಮೈದಾನಕ್ಕೆ ಎಂಟ್ರಿ ಸಿಗುವ ಸಾಧ‍್ಯತೆ ಕಡಿಮೆ. ಆದರೆ ನೇರಪ್ರಸಾರಕ್ಕೆ ತೊಂದರೆಯಿರೋದಿಲ್ಲ.

ಇನ್ನು ಉಳಿದಂತೆ ಫೈನಲ್ ವೇಳಾಪಟ್ಟಿ, ಪಂದ್ಯ ನಡೆಯುವ ಸಮಯ, ದಿನಾಂಕಗಳ ಕುರಿತು ಮುಂದಿನ ವಾರ ನಡೆಯಲಿರುವ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ತರಬೇತಿ ಕ್ಯಾಂಪ್ ಗೂ ಧೋನಿಗೆ ನೋ ಎಂಟ್ರಿ