Select Your Language

Notifications

webdunia
webdunia
webdunia
webdunia

ಜಹೀರ್, ಸೆಹ್ವಾಗ್, ಹರ್ಭಜನ್ ಗೆ ಬಿಸಿಸಿಐನಿಂದ ಅನ್ಯಾಯ

ಜಹೀರ್, ಸೆಹ್ವಾಗ್, ಹರ್ಭಜನ್ ಗೆ ಬಿಸಿಸಿಐನಿಂದ ಅನ್ಯಾಯ
ಮುಂಬೈ , ಸೋಮವಾರ, 27 ಜುಲೈ 2020 (12:22 IST)
ಮುಂಬೈ: ಟೀಂ ಇಂಡಿಯಾದ ಶ್ರೇಷ್ಠ ಆಟಗಾರರಾಗಿದ್ದ ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಹರ್ಭಜನ್ ಸಿಂಗ್ ಮೊದಲಾದವರಿಗೆ ಬಿಸಿಸಿಐ ಅನ್ಯಾಯ ಮಾಡಿತು ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.


‘ಗೌರವಯುತ ನಿವೃತ್ತಿ ನೀಡುವುದು ನಮ್ಮ ಕೈಯಲ್ಲಿಲ್ಲ. ನನಗೆ ವಿದಾಯ ನೀಡಿದ್ದೂ ವೃತ್ತಿಪರವಾಗಿರಲಿಲ್ಲ. ಆದರೆ ನನಗಿಂತ ಹಿಂದೆ ಜಹೀರ್, ಸೆಹ್ವಾಗ್, ಹರ್ಭಜನ್ ಮುಂತಾದ ಮ್ಯಾಚ್ ವಿನ್ನರ್ ಗಳನ್ನೇ ಬಿಸಿಸಿಐ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇವರೆಲ್ಲಾ ಅತ್ಯುತ್ತಮ ವಿದಾಯ ಪಂದ್ಯಕ್ಕೆ ಅರ್ಹರಾಗಿದ್ದರು. ಆದರೆ ಅವರಿಗೆ ಅದನ್ನು ನೀಡದೇ ಬಿಸಿಸಿಐ ಅನ್ಯಾಯ ಮಾಡಿತು’ ಎಂದು ಯುವ ಅಭಿಪ್ರಾಯಪಟ್ಟಿದ್ದಾರೆ.

ಕೊಹ್ಲಿ ಅತ್ಯಂತ ಫಿಟ್ ಆಟಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮ ಹುಡುಗರು ಕೊಹ್ಲಿಯ ಹಿಂದೆ ಬಿದ್ದಿಲ್ಲ. ನಾವು ಯಾರ್ಯಾರನ್ನೋ ಕಾಪಿ ಮಾಡಲ್ಲ. ನಮಗೆ ನಮ್ಮದೇ ಲೆವೆಲ್ ಇದೆ’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಯುಎಇ ಮಂಡಳಿಗೆ ತಲುಪಿತು ಬಿಸಿಸಿಐ ಪತ್ರ