Select Your Language

Notifications

webdunia
webdunia
webdunia
webdunia

ದೆಹಲಿ ಧಾರ್ಮಿಕ ಸಭೆಗೆ ತೆರಳಿದ್ದ ತಬ್ಲಿಘಿಗಳ ಕೊರೊನಾ ರಿಪೋರ್ಟ್

ದೆಹಲಿ ಧಾರ್ಮಿಕ ಸಭೆಗೆ ತೆರಳಿದ್ದ ತಬ್ಲಿಘಿಗಳ ಕೊರೊನಾ ರಿಪೋರ್ಟ್
ಕಾರವಾರ , ಭಾನುವಾರ, 5 ಏಪ್ರಿಲ್ 2020 (14:40 IST)
ದೆಹಲಿಯ ನಿಜಾಮುದ್ದೀನ್ ಜಮಾತ್ ಧಾರ್ಮಿಕ ಸಭೆಗೆ ಈ ಜಿಲ್ಲೆಯಿಂದ ತೆರಳಿದ್ದ ತಬ್ಲಿಘಿಗಳ ರಿಪೋರ್ಟ್ ಬಂದಿದೆ.

ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಉತ್ತರ ಕನ್ನಡ ಜಿಲ್ಲೆಗೆ ಮರಳಿದ್ದ ಐವರ ವರದಿ ನೆಗೆಟಿವ್ ಬಂದಿದೆ ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ತಿಳಿಸಿದ್ದಾರೆ.

ಈ ಧಾರ್ಮಿಕ ಸಭೆಗೆ ತೆರಳಿದ್ದ ಜಿಲ್ಲೆಯ ದಾಂಡೇಲಿಯ ಎಂಟು ಜನರನ್ನು ಪತ್ತೆ ಮಾಡಲಾಗಿತ್ತು. ಇವರಲ್ಲಿ ಐವರು ಮಾತ್ರ ಜಿಲ್ಲೆಯಲ್ಲಿ ವಾಸವಿದ್ದು, ಉಳಿದ ಮೂವರು ಹೊರ ಜಿಲ್ಲೆಯಲ್ಲಿದ್ದಾರೆ.

ಈ ಐವರನ್ನು ಹೋಮ್ ಕ್ವಾರಂಟೈನ್‌ಗೆ ಒಳಪಡಿಸಿ ಇವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವರೆಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ಡಿಸಿ ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸರಿಗೆ ಕಲ್ಲು ತೂರಿ ನಮಾಜ್ : 10 ಜನರು ಅರೆಸ್ಟ್