Publish Date: Mon, 27 Apr 2020 (16:13 IST)
Updated Date: Mon, 27 Apr 2020 (16:17 IST)
ಪೊಲೀಸರು ಯಮರಾಜನಾಗಿ ಕೊರೊನಾ ವೈರಸ್ ಸಂಹಾರ ಮಾಡಿ ಜನಮನ ಗೆದ್ದಿದ್ದಾರೆ.
ಕೊರೊನಾ ತಡೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಈಗ ಒಂದು ಹೆಜ್ಜೆ ಮುಂದೆ ಹೋಗಿ ಬೀದಿ ನಾಟಕ ಪ್ರದರ್ಶನ ಮಾಡಿ ಜಾಗೃತಿ ಮೂಡಿಸಿದೆ.
ಬಾಳೆಹೊನ್ನೂರು ಪೊಲೀಸರು "ಮಾಡಲು ಕೊರೊನಾ ಸಂಹಾರ ಪಾಲಿಸಿ ಸಾಮಾಜಿಕ ಅಂತರ " ಎಂಬ ಬೀದಿ ನಾಟಕ ಮಾಡಿದ್ದಾರೆ.
ಪೊಲೀಸರೇ ಯಮಧರ್ಮರಾಜ, ಮಂತ್ರಿ, ರಾಜನ ವೇಷ ಧರಿಸಿ ಕೊರೊನಾ ತಡೆ ಬಗ್ಗೆ ಜಾಗೃತಿ ಮೂಡಿಸಿದ್ದಾ ರೆ. ಪೊಲೀಸರ ಈ ಕೆಲಸನ್ನು ಮಾಜಿ ದಕ್ಷ ಪೊಲೀಸ್ ಅಧಿಕಾರಿ ವಿ ದಿ ಲೀಡರ್ಸ್ ಸಂಸ್ಥೆ ಸ್ಥಾಪಕ ಕೆ. ಅಣ್ಣಾಮಲೈ ಮೆಚ್ಚಿಕೊಂಡು ಟ್ವಿಟ್ ಮಾಡಿದ್ದಾರೆ.