Publish Date: Mon, 27 Apr 2020 (16:02 IST)
Updated Date: Mon, 27 Apr 2020 (16:04 IST)
ಮಾಧ್ಯಮದವರಿಗೆ ಕೊರೊನಾ ವೈರಸ್ ಟೆಸ್ಟ್ ಮಾಡಲಾಗಿದೆ.
ಧಾರವಾಡ ನಗರದ ಜಿಲ್ಲಾಸ್ಪತ್ರೆಯಲ್ಲಿ ಧಾರವಾಡ ಮಾಧ್ಯಮದವರಿಗೆ ನಡೆಸಿದ ಕೊವೀಡ್ ತಪಾಸಣಾ ವರದಿಗಳು ನೆಗೆಟಿವ್ ಬಂದಿವೆ.
ಒಟ್ಟು ಧಾರವಾಡದ 60 ಮಾಧ್ಯಮ ಪ್ರತಿನಿಧಿಗಳು ಕೋವಿಡ್ ತಪಾಸಣೆ ಮಾಡಿಸಿಕೊಂಡಿದ್ದರು. ಅವರ ಗಂಟಲು ದ್ರವವನ್ನು ಪರೀಕ್ಷೆ ಮಾಡಲು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಎಲ್ಲಾ ಮಾಧ್ಯಮ ಪ್ರತಿನಿಧಿಗಳ ವರದಿ ನೆಗೆಟಿವ್ ಬಂದಿದ್ದರಿಂದ ಧಾರವಾಡ ಮಾಧ್ಯಮದವರು ನಿಟ್ಟುಸಿರು ಬಿಡುವಂತಾಗಿದೆ.
ಮುಂಬೈ, ಬೆಂಗಳೂರು ಸೇರಿದಂತೆ ಹಲವೆಡೆ ಕಾರ್ಯನಿರತ ಪತ್ರಕರ್ತರಲ್ಲಿ ಸೋಂಕು ಕಂಡುಬಂದಿತ್ತು. ಇದರಿಂದ ಎಚ್ವೆತ್ತುಕೊಂಡಿದ್ದ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಗಳ ಮಾಧ್ಯಮ ಪ್ರತಿನಿಧಿಗಳ ತಪಾಸಣೆ ನಡೆಸಲು ಸೂಚನೆ ನೀಡಿತ್ತು.