Select Your Language

Notifications

webdunia
webdunia
webdunia
webdunia

ಕೊರೋನಾ ಲೀಲೆ.. ಒಂದು ಕಾಲದ ಐಟಿ ಮ್ಯಾನೇಜರ್ ಈಗ ಚೈನ್ ಸ್ನಾಚರ್!

ಕೊರೋನಾ ಲೀಲೆ.. ಒಂದು ಕಾಲದ ಐಟಿ ಮ್ಯಾನೇಜರ್ ಈಗ ಚೈನ್ ಸ್ನಾಚರ್!
ಬೆಂಗಳೂರು , ಶನಿವಾರ, 31 ಜುಲೈ 2021 (17:19 IST)
ಬೆಂಗಳೂರು(ಜು. 31) ಕೊರೋನಾ ಕಾಲದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ ವ್ಯಕ್ತಿ ಕಳ್ಳನಾಗಿ ಬದಲಾಗಿದ್ದಾನೆ.  ವಿದ್ಯಾವಂತರನ್ನೇ ಕೊರೋನಾ ಬೀದಿಗೆ ತಳ್ಳಿದೆ. ಮಾಡಿದ್ದು ಎಂಬಿಎ ಇಳಿದದ್ದು ಸರಗಳ್ಳತನಕ್ಕೆ!

ಹೌದು  ಲಾಕ್ ಡೌನ್ ಎಫೆಕ್ಟ್ ಗೆ ಪದವೀಧರ ಕಳ್ಳನಾಗಿದ್ದಾನೆ. ಶೇಖ್ ಗೌಸ್ ಬಾಷಾ  ಸರಗಳ್ಳತನಕ್ಕೆ ಇಳಿದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
* ವಿದ್ಯಾವಂತರನ್ನೇ ಬೀದಿಗೆ ತಳ್ಳಿದ ಕರೋನಾ
* ಮಾಡಿದ್ದು ಎಂಬಿಎ ಇಳಿದದ್ದು ಸರಗಳ್ಳತನಕ್ಕೆ
* ಲಾಕ್ ಡೌನ್ ಎಫೆಕ್ಟ್ ಗೆ ಎಂಬಿಎ ಹೋಲ್ಡರ್ ಕಳ್ಳನಾ
* ಖಾಸಗಿ ಕಂಪೆನಿಯ ಮ್ಯಾನೇಜರ್ ಆಗಿದ್ದವ ಕಳ್ಳನಾದ ಕತೆ..
ಖಾಸಗಿ ಕಂಪನಿಯ ಮ್ಯಾನೇಜರ್ ಆಗಿದ್ದ ಗೌಸ್ 35,000 ಸಾಲ ತೀರಿಸಲು ಕಳ್ಳತನವನ್ನ ಶುರುಹಚ್ಚಿಕೊಂಡ. ಜಯನಗರದ ಪೂರ್ಣಿಮಾ ಕನ್ವೆನ್ಷನ್ ಹಾಲ್ ನಿಂದ ಬರ್ತಿದ್ದ ಮಹಿಳೆಯ ಸರ ಎಗರಿಸಿದ್ದ.
ಜಯನಗರ ಪೊಲೀಸರಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ,"ಸರ್..ಎಂಬಿಎ ಪದವೀಧರ ನಾನು..ಕರೋನಾ ವೇಳೆ ಕೆಲಸದಿಂದ ತೆಗೆದುಹಾಕಿದ್ರು. "ಸಾಲಗಾರರ ಕಿರುಕುಳ ಹೆಚ್ಚಾಗಿತ್ತು.. "ಬೇರೆಡೆ ಕೆಲಸಕ್ಕೆ ಟ್ರೈ ಮಾಡಿದ್ದೆ, ಆದರೇ ಕೆಲಸ ಸಿಕ್ಕಿರ್ಲಿಲ್ಲ.. ಹೀಗಾಗಿ ಸರಗಳ್ಳತನ ಕ್ಕೆ ಮುಂದಾದೆ' ಎಂದು ಹೇಳಿದ್ದಾನೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಮತ್ತೆ ಕೊರೋನಾ ಭೀತಿ: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ