Publish Date: Wed, 28 Jul 2021 (15:33 IST)
Updated Date: Wed, 28 Jul 2021 (15:38 IST)
ವಿದೇಶದಿಂದ ಪಾರ್ಸೆಲ್ ನಲ್ಲಿ ಗನ್ ಗಳನ್ನು ಕಂಡು ಸಿಬ್ಬಂದಿ ಹಾಗೂ ಪ್ರಯಾಣಿಕರು ಆತಂಕಗೊಂಡ ಘಟನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್ ನಲ್ಲಿ ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಪಾರ್ಸೆಲ್ ಹೊರಗೆ ಕಳುಹಿಸುವಾಗ ಅನುಮಾನಗೊಂಡು ಚೆಕ್ ಮಾಡಿದಾಗ ಅತ್ಯಾಧುನಿಕ ಗನ್ ಗಳನ್ನು ಕಂಡು ಸಿಬ್ಬಂದಿ ಗಾಬರಿಯಾಗಿದ್ದಾರೆ.
ಮಂಗಳವಾರ ಕಾರ್ಗೋ ಟರ್ಮಿನಲ್ ಗೆ ಇಸ್ತಾಂಬುಲ್ ನಿಂದ ಬಂದಿದ್ದ ಪಾರ್ಸಲ್ ಓಪನ್ ಮಾಡಿ ನೋಡಿದಾಗ ಪಾರ್ಸಲ್ ಒಳಗಡೆ ಗನ್ ಗಳು ಪತ್ತೆಯಾಗಿವೆ. ಗನ್ ಗಳನ್ನು ಹೊರಗೆ ತೆಗೆದು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವುಗಳು ಡಮ್ಮಿ ಗನ್ ಗಳು ಅನ್ನೋದು ಗೊತ್ತಾಗಿ ಸಿಬ್ಬಂದಿ ನಿಟ್ಟುಸಿರುಬಿಟ್ಟಿದೆ.
ಇಸ್ತಾಂಬುಲ್ ನಿಂದ ಬೆಂಗಳೂರಿನ ಕೊರಿಯರ್ ಸೆಂಟರ್ ಗೆ ಪಾರ್ಸೆಲ್ ಬಂದಿದ್ದು, ಪಾರ್ಸಲ್ ಬಗ್ಗೆ ವಿಮಾನ ನಿಲ್ದಾಣ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕ ಮೂಡಿಸಿದ ಗನ್ ಗಳು!