Select Your Language

Notifications

webdunia
webdunia
webdunia
webdunia

2 ಡೋಸ್ ಲಸಿಕೆ ನೀಡಿಕೆ : ಬೆಂಗಳೂರಿಗೆ 2ನೇ ಸ್ಥಾನ

2 ಡೋಸ್ ಲಸಿಕೆ ನೀಡಿಕೆ : ಬೆಂಗಳೂರಿಗೆ 2ನೇ ಸ್ಥಾನ
ಚೆನ್ನೈ , ಶುಕ್ರವಾರ, 23 ಜುಲೈ 2021 (09:41 IST)
ಚೆನ್ನೈ (ಜು.23): ದೇಶದ ಪ್ರಮುಖ ನಗರಗಳ ಪೈಕಿ ಎರಡೂ ಡೋಸ್ ಕೋವಿಡ್ ಲಸಿಕೆ ವಿತರಣೆಯಲ್ಲಿ ಬೆಂಗಳೂರು ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ತಮಿಳುನಾಡು ರಾಜಧಾನಿ ಚೆನ್ನೈ ಇದೆ.

•ದೇಶದ ಪ್ರಮುಖ ನಗರಗಳ ಪೈಕಿ ಎರಡೂ ಡೋಸ್ ಕೋವಿಡ್ ಲಸಿಕೆ ವಿತರಣೆಯಲ್ಲಿ ಬೆಂಗಳೂರು ದೇಶದಲ್ಲೇ 2ನೇ ಸ್ಥಾನ
ಮೊದಲ ಸ್ಥಾನದಲ್ಲಿ ತಮಿಳುನಾಡು ರಾಜಧಾನಿ ಚೆನ್ನೈ ಇದೆ
ಕೋವಿನ್ ವೆಬ್ಸೈಟ್ನಲ್ಲಿ ಒದಗಿಸಲಾದ ದತ್ತಾಂಶದ ಪ್ರಕಾರ, ಚೆನ್ನೈನ 80 ಲಕ್ಷ ಜನರ ಪೈಕಿ 59.46 ಲಕ್ಷ ಜನರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ. ಇವರಲ್ಲಿ ಜು.20ರ ವರೆಗೆ 9.11 ಲಕ್ಷ ಜನರಿಗೆ ಎರಡೂ ಡೋಸ್ ನೀಡಲಾಗಿದೆ. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಶೇ.12 ಮತ್ತು ಲಸಿಕೆ ಪಡೆಯಲು ಅರ್ಹರಾದವರ ಪೈಕಿ ಶೇ.15ರಷ್ಟುಜನರಿಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ.

39 ಕೋಟಿ ಮೈಲಿಗಲ್ಲು ದಾಟಿದ ಭಾರತದ ಕೋವಿಡ್ ಲಸಿಕಾ ಅಭಿಯಾನ!
ಇನ್ನು ಬೆಂಗಳೂರಿನ ಒಟ್ಟು 1.2 ಕೋಟಿ ಜನರ ಪೈಕಿ ಲಸಿಕೆ ಪಡೆಯಲು 99 ಲಕ್ಷ ಅರ್ಹತೆ ಹೊಂದಿದ್ದಾರೆ. ಈ ಪೈಕಿ 54.55 ಲಕ್ಷ ಜನರು ಮೊದಲ ಡೋಸ್ ಮತ್ತು 13.81 ಲಕ್ಷ ಜನರು ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಅಂದರೆ ಒಟ್ಟು ಜನಸಂಖ್ಯೆಯ ಶೇ.10 ಮತ್ತು ಲಸಿಕೆ ಪಡೆಯಲು ಅರ್ಹರಾದವರ ಪೈಕಿ ಶೇ.14ರಷ್ಟುಜನರು ಲಸಿಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ಇನ್ನು ಮುಂಬೈನಲ್ಲಿ ಒಟ್ಟು ಜನಸಂಖ್ಯೆಯ ಶೇ.8ರಷ್ಟುಮಂದಿ ಹಾಗೂ ದೆಹಲಿಯಲ್ಲಿ ಒಟ್ಟು ಜನಸಂಖ್ಯೆಯ ಶೇ.7ರಷ್ಟುಮಂದಿ ಲಸಿಕೆ ಪಡೆದುಕೊಂಡಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ಕಾಲೇಜಲ್ಲಿ ವರದಕ್ಷಿಣೆ ವಿರೋಧಿ ಬಾಂಡ್ ಕಡ್ಡಾಯ?