Select Your Language

Notifications

webdunia
webdunia
webdunia
webdunia

ಬೆಂಗಳೂರು ನಗರದಲ್ಲಿ ಲಸಿಕೆ ಕೊರತೆ

ಬೆಂಗಳೂರು ನಗರದಲ್ಲಿ ಲಸಿಕೆ ಕೊರತೆ
ಬೆಂಗಳೂರು , ಶುಕ್ರವಾರ, 30 ಜುಲೈ 2021 (20:53 IST)
ಬೆಂಗಳೂರು (ಜು. 30 ): ಕೊರೋನಾ ಎರಡನೇ ಅಲೆ ಸೋಂಕು ತಗ್ಗಿತು ಎನ್ನುವ ಹೊತ್ತಿನಲ್ಲೇ ರೆ ಇದೀಗ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವುದು ಭೀತಿ ಹುಟ್ಟಿಸಿದೆ. ಜೊತೆಗೆ ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ.

ಇದರ ನಡುವೆ ಮೂರನೇ ಅಲೆಗೂ ಮುಂಚಿತವಾಗಿ ನಗರದ ಒಂದು ಕೋಟಿಗೂ ಅಧಿಕ ಮಂದಿಗೆ ಲಸಿಕೆ ಕೊಟ್ಟು ಮುಗಿಸುವ ಪಣ ತೊಟ್ಟಿದ್ದ ಬಿಬಿಎಂಪಿ ಗುರಿಯೂ ವಿಫಲವಾದಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಗರದ ಹಲವು ಲಸಿಕಾ ಕೇಂದ್ರಗಳಲ್ಲಿ ಸರತಿ ಸಾಲು ಸಾಮಾನ್ಯವಾಗಿ ಹೋಗಿದೆ.
ನೆರೆಯ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದೆ. ಈ ಹಿನ್ನಲೆ ರಾಜ್ಯದಲ್ಲೂ ಕೂಡ ಆತಂಕ ಮನೆ ಮಾಡಿದೆ. ಈಗಾಗಲೇ ದಕ್ಷಿಣ ಕನ್ನಡ, ಬೆಂಗಳೂರಿನಲ್ಲಿ ಸೋಂಕಿನ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಕಂಡು ಬಂದಿದೆ,  ಮೂರನೇ ಅಲೆಯ ಭೀತಿಯೂ ಸಿಲಿಕಾನ್ ಸಿಟಿಗಿದೆ. ಇದರ ನಡುವೆ ಲಸಿಕೆ ನೀಡುವ  ಯೋಜನೆ ಹಾಕಿಕೊಂಡಿದ್ದ ಬಿಬಿಎಂಪಿಗೆ ಈಗ ಹಿನ್ನಡೆಯಾಗಿದೆ. ಸದ್ಯ ನಗರದಲ್ಲಿ ಮೈಕ್ರೋ ಕಂಟೈನ್ಮೆಟ್ ಝೋನ್ಗಳ ಸಂಖ್ಯೆ ಶತಕ ದಾಟಿದ್ದು ಸೋಂಕು ಹೆಚ್ಚಳವಾಗುತ್ತಿರುವುದು ದಿಟವಾಗಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ ನಗರದಲ್ಲಿ ಲಸಿಕೆಗೆ ಹಾಹಾಕಾರ ಉಂಟಾಗಿದೆ. ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ನಗರದ ಕೆಸಿ ಜನರಲ್ ಆಸ್ಪತ್ರೆಯ ಲಸಿಕೆ ಹಂಚಿಕಾ ಕೇಂದ್ರದಲ್ಲಿ ಜನ ಜಾತ್ರೆ ಇತ್ತು. ಬೆಳಗ್ಗೆ 8 ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತುಕೊಂಡು ಜನರು ಲಸಿಕೆಗಾಗಿ ಕಾಯುತ್ತಿದ್ದರು. ಸತತ 4 ಗಂಟೆಯಿಂದ ಉರಿ ಬಸಿಲಿನಲ್ಲಿ ವ್ಯಾಕ್ಸಿನ್ ಗಾಗಿ ಜನರು ಕಾದು ನಿಂತಿದ್ದರು. ಈ ಹಿಂದೆಯೇ ಪಾಲಿಕೆ, ಕೇಂದ್ರ ಸರ್ಕಾರದಿಂದ ಸೂಕ್ತ ಪ್ರಮಾಣದಲ್ಲಿ ಲಸಿಕೆ ಲಭಿಸುತ್ತಿಲ್ಲ ಎಂದಿತ್ತು. ಪಾಲಿಕೆ ಲಸಿಕೆ ಅಭಾವ ಎದುರಿಸುತ್ತಿದೆ ಎಂದು ಮುಖ್ಯ ಆಯುಕ್ತ ಗೌರವ್ ಗುಪ್ತಾ ನೇರವಾಗೇ ಒಪ್ಪಿಕೊಂಡಿದ್ದರು. ಇದೀಗ ಅದೇ ಪಾಡು ನಗರದಲ್ಲಿ ಮುಂದುವರೆದಿದೆ. ಈ ಬಗ್ಗೆ ಕೆಸಿ ಜನರಲ್ ಲಸಿಕಾ ಕೇಂದ್ರಕ್ಕೆ ಲಸಿಕೆ ಹಾಕಿಸಿಕೊಳ್ಳಲು ಸತತ ಐದು ದಿನಗಳಿಂದ ಓಡಾಡುತ್ತಿರುವ ಒಬ್ಬ ಮಹಿಳೆ ಲಸಿಕೆ ಸಿಗದ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.
ಕಳೆದ ಐದು ದಿನದಲ್ಲಿ ನಗರದಲ್ಲಾದ ವ್ಯಾಕ್ಸಿನೇಷನ್ ವಿವರ
24/07/21-67,428
25/07/21- 32,80726/07/21- 44,226
27/07/21- 54,903
28/07/21- 39,171
ನಗರದಲ್ಲಿ ಈವರೆಗೆ ಒಟ್ಟು ಮೊದಲ ಡೋಸ್ ಪಡೆದವರು
18-44 : 29,95,505
44 ಪ್ಲಸ್ :  20,78,718
ಒಟ್ಟು : 50,74,223
ನಗರದಲ್ಲಿ ಈವರೆಗೆ ಒಟ್ಟು ಎರಡನೇ ಡೋಸ್ ಪಡೆದವರು
18 - 44 : 2,70,037
44 ಪ್ಲಸ್ : 10,31,537
ಒಟ್ಟು : 13,01,574
ಒಟ್ಟಾರೆಯಾಗಿ ನಗರದಲ್ಲಿ ದಿನದಿಂದ ದಿನಕ್ಕೆ ಲಸಿಕೆ ಕೊರತೆ ಹೆಚ್ಚಾಗುತ್ತಿದೆ. ಇದಕ್ಕೆ ನಿದರ್ಶನದಂತೆ ಕೆಸಿ ಜನರಲ್ ಆಸ್ಪತ್ರೆ ಮುಂಭಾಗದಲ್ಲಿ ಸರತಿ ಸಾಲಲ್ಲಿ ಲಸಿಕೆಗಾಗಿ ನಿಂತಿರುವ ಜನ ಪರದಾಡುತ್ತಿದ್ದಾರೆ. ಕೇವಲ ಕೆಸಿ ಜನರಲ್ ಮಾತ್ರವಲ್ಲ ಲಸಿಕೆಗಾಗಿ ಈ ರೀತಿಯ ಸರತಿ ಸಾಲುಗಳು ನಗರದ ಬಹುತೇಕ ಲಸಿಕಾ ಕೇಂದ್ರಗಳಲ್ಲಿ ಕಾಣಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

PM ಮೋದಿ ಭೇಟಿಯಾದ CM ಬೊಮ್ಮಾಯಿಗೆ ಸಿಕ್ತು ಕರ್ನಾಟಕದ ಅಭಿವೃದ್ಧಿ ಭರವಸೆ!