Publish Date: Tue, 07 Jul 2020 (20:54 IST)
Updated Date: Tue, 07 Jul 2020 (20:57 IST)
ಕೊರೊನಾ ವೈರಸ್ ಪೀಡಿತ ರೋಗಿಯೊಬ್ಬನ ಎಡವಟ್ಟಿನಿಂದಾಗಿ ಜಯದೇವ ಹೃದ್ರೋಗ ಆಸ್ಪತ್ರೆ ಬಂದ್ ಆಗಿದೆ.
ರೋಗಿಯೊಬ್ಬ ಬಸವೇಶ್ವರ ಆಸ್ಪತ್ರೆಗೆ ಮೊದಲು ದಾಖಲಾಗಿದ್ದನು. ಅಲ್ಲಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ ಬಂದು ದಾಖಲಾಗಿದ್ದಾನೆ.
ಆತನಿಗೆ ಆ್ಯಂಜಿಯೋಗ್ರಾಂ ಆಪರೇಷನ್ ಮಾಡಲಾಗಿತ್ತು. ರೋಗಿಯ ಕೊರೊನಾ ವರದಿ ಪಾಸಿಟಿವ್ ಬಂದಿದೆ. ತನ್ನ ಆರೋಗ್ಯದ ಕುರಿತು ಮಾಹಿತಿ ಕೊಡದೇ ದಾಖಲಾಗಿ ಆಪರೇಷನ್ ಮಾಡಿಕೊಂಡಿದ್ದಾನೆ ರೋಗಿ.
ಹೀಗಾಗಿ ಕಲಬುರಗಿಯ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಸ್ಯಾನಿಟೈಜ್ ಆಗೋವರೆಗೂ ಬಂದ್ ಮಾಡಲಾಗಿದೆ.
ಆಪರೇಷನ್ ಮಾಡಿದ ವೈದ್ಯರು ಹಾಗೂ ಸಿಬ್ಬಂದಿಗೆ ಕೊರೊನಾ ಆತಂಕ ಶುರುವಾಗಿದೆ.