ಮತ್ತೆ ಆಪರೇಷನ್ ಕಮಲ ಶುರು : ಬಿಜೆಪಿ ರಾಜ್ಯಾಧ್ಯಕ್ಷ ಹೇಳಿದ್ದೇನು?

ಗುರುವಾರ, 20 ಫೆಬ್ರವರಿ 2020 (15:01 IST)

ಬಿಜೆಪಿಯ ಕೆಲವು ಶಾಸಕರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ ಅನ್ನೋ ಸುದ್ದಿಗೆ ಬಿಜೆಪಿ ಮುಖಂಡರು ಪ್ರತಿಕ್ರಿಯೆ ನೀಡಿದ್ದು, ಆಪರೇಷನ್ ಕಮಲದ ಸುಳಿವು ನೀಡತೊಡಗಿದ್ದಾರೆ.
 

ಪಕ್ಷಕ್ಕೆ ಬಂದವರನ್ನು ನಾವು ಬೇಡ ಅನ್ನೋದಿಲ್ಲ. ಸದ್ಯದ ಮಟ್ಟಿಗೆ ಹೇಳೋದಾದ್ರೆ ಆಪರೇಷನ್ ಕಮಲ ನಿಲ್ಲಿಸಿದ್ದೇವೆ. ಆದರೆ ಬಿಜೆಪಿ ಮನೆ ಬಾಗಿಲು ತೆರೆದೇ ಇದೆ.

ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳೋ ಮೂಲಕ ಮತ್ತೆ ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾಗುತ್ತಾ ಅನ್ನೋ ಕುತೂಹಲಕ್ಕೆ ನಾಂದಿ ಹಾಡಿದ್ದಾರೆ.

ರಾಜೀನಾಮೆ ಕೊಟ್ಟು ಯಾರೇ ಬಂದರೂ ಅಂತಹ ಶಾಸಕರನ್ನು ಸ್ವಾಗತ ಮಾಡಿಕೊಳ್ಳುತ್ತೇವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪೊಲೀಸ್ ನಡೆ ವಿರುದ್ಧ ಕೆಂಡ ಕಾರಿದ ಬಿಜೆಪಿ ಸಂಸದ