Publish Date: Sun, 09 Feb 2020 (15:53 IST)
Updated Date: Sun, 09 Feb 2020 (15:54 IST)
ನನಗೆ ಸಿದ್ದರಮಯ್ಯರನ್ನ ನೋಡಿದ್ರೆ ಅಯ್ಯೋ ಪಾಪ ಎನ್ನಿಸುತ್ತಿದೆ.
ಅವರ ಪಾರ್ಟಿಗೆ ಅವರಿಗೆ ಈ ಸ್ಥಿತಿ ಬರಬಾರದಿತ್ತು. ಹೀಗಂತ ಬಿಜೆಪಿ ರಾಜ್ಯಾಧ್ಯಕ್ಷ ವ್ಯಂಗ್ಯವಾಡಿದ್ದಾರೆ.
ಸಿಎಂ ಬಿ.ಎಸ್.ಯಡಿಯೂರಪ್ಪರ ಕೈಕಾಲನ್ನು ಬಿಜೆಪಿ ಹೈಕಮಾಂಡ್ ಕಟ್ಟಿ ಹಾಕಿದೆ ಅಂತ ಸಿದ್ದರಾಮಯ್ಯ ಮಾಡಿರೋ ಟ್ವಿಟ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರೋ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಪಾರ್ಟಿಯಲ್ಲಿ ರಾಜ್ಯಾಧ್ಯಕ್ಷರಿಲ್ಲದೆ ಆರು ತಿಂಗಳಾಯ್ತು.
ಸಿದ್ದರಾಮಯ್ಯ ವಿರೋಧ ಪಕ್ಷದ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಆರು ತಿಂಗಳಾಯ್ತು. ಅವರನ್ನ ಸಿಎಲ್ಪಿ ಲೀಡರ್ ಮಾಡಲು ಕೇಂದ್ರದಲ್ಲಿ ಕೈಕಾಲು ಹಿಡಿಯುತ್ತಿದ್ದಾರೆ. ಅವರು ಅವರ ದುಖಃವನ್ನ ಹೇಳಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದ್ರು.
ಅವರಿಗೆ ಹೇಳಿದರೆ ಅಪಮಾನ ಆಗುತ್ತದೆ ಎಂದು ಮತ್ತೊಬ್ಬರನ್ನ ತೋರಿಸುತ್ತಿದ್ದಾರೆ.
ಇಲ್ಲಿ ಬಿಎಸ್ವೈ ನಮ್ಮ ನಾಯಕರು. ಪೂರ್ತಿ ಜವಬ್ದಾರಿಯನ್ನ ಹೈಕಮಾಂಡ್ ಅವರಿಗೆ ಕೊಟ್ಟಿದೆ. ಬಿಎಸ್ವೈ ನಿಶ್ಚಯದಂತೆ ಬಂದವರಿಗೆ ಸ್ಥಾನಮಾನಕೊಟ್ಟಿದ್ದೇವೆ. ಹತ್ತು ಜನರನ್ನ ಮಂತ್ರಿಮಾಡಿ ನುಡಿದಂತೆ ನಡೆದಿದ್ದಾರೆ. ಕಾಂಗ್ರೆಸ್ ನವರು ಮೊದಲು ತಮ್ಮ ಪಕ್ಷಕ್ಕೆ ರಾಜ್ಯಾಧ್ಯಕ್ಷರನ್ನ ಮಾಡಿ ಮಾತಾಡಲಿ ಎಂದಿದ್ದಾರೆ.