Select Your Language

Notifications

webdunia
webdunia
webdunia
webdunia

ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಅಸಮಾಧಾನ ಹೊರಹಾಕಿದ ಅಥಣಿ ಕ್ಷೇತ್ರದ ಜನರು

ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಅಸಮಾಧಾನ ಹೊರಹಾಕಿದ ಅಥಣಿ ಕ್ಷೇತ್ರದ ಜನರು
ಬೆಳಗಾವಿ , ಭಾನುವಾರ, 9 ಫೆಬ್ರವರಿ 2020 (11:09 IST)
ಬೆಳಗಾವಿ : ಸಚಿವ ಸ್ಥಾನ ಸಿಗದಿದ್ದರೂ ಇನ್ನೂ ಕ್ಷೇತ್ರಕ್ಕೆ ಮರಳದೆ ಬೆಂಗಳೂರಿನಲ್ಲೇ ಬೀಡು ಬಿಟ್ಟಿರುವ ಅಥಣಿ ಕ್ಷೇತ್ರದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ವಿರುದ್ಧ ಕ್ಷೇತ್ರದ ಜನರು ಅಸಮಾಧಾನ ಹೊರಹಾಕಿದ್ದಾರೆ.

ಕಳೆದ ಒಂದು ವಾರದಿಂದ ಮಹೇಶ್ ಕುಮಟಳ್ಳಿ ಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಈ ನಡುವೆ ಪ್ರವಾಹ ಸಂತ್ರಸ್ತರು ಪರಿಹಾರ ಸಿಗದೆ ಪರದಾಡುತ್ತಿದ್ದಾರೆ. ಇದರಿಂದ ಕ್ಷೇತ್ರದ ಜನರು ಶಾಸಕರ ವಿರುದ್ಧ ಆಕ್ರೋಶಗೊಂಡಿದ್ದಾರೆ.

 

ಸಚಿವ ಸ್ಥಾನ ಸಿಗದಿದ್ದರೆ ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುತ್ತೇನೆ ಎಂದು ಮಹೇಶ್ ಕುಮಟಳ್ಳಿ ಈ ಹಿಂದೆ ಹೇಳಿದ್ದ ಹೇಳಿಕೆಗೆ ವ್ಯಂಗ್ಯವಾಡುತ್ತಾ ನ್ಯಾಯಾವಾದಿ ಪ್ರಮೋದ್ ಹಿರೇಮಣಿ ಎಂಬುವವರು, ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುವ ಕೆಲಸ ಮುಗಿದಿದ್ದರೆ ದಯವಿಟ್ಟು ಕ್ಷೇತ್ರಕ್ಕೆ ಬನ್ನಿ. ಪ್ರವಾಹ ಸಂತ್ರಸ್ತರ ಗೋಳು ಕೇಳಿ ಎಂದು ಪೋಸ್ಟ್ ಮಾಡಿದ್ದಾರೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಬಚ್ಚೇಗೌಡ ನನ್ನನ್ನು ಸೋಲಿಸಿದರು ಎಂಬ ಎಂಟಿಬಿ ಹೇಳಿಕೆಗೆ ಬಚ್ಚೇಗೌಡರು ಹೇಳಿದ್ದೇನು?