Select Your Language

Notifications

webdunia
webdunia
webdunia
webdunia

ಕೊರೊನಾ ತಡೆ : ಎನ್ ಜಿ ಓ - ಸ್ವಯಂ ಸೇವಕರ ನೋಂದಣಿ ಶುರು

ಕೊರೊನಾ ತಡೆ : ಎನ್ ಜಿ ಓ - ಸ್ವಯಂ ಸೇವಕರ ನೋಂದಣಿ ಶುರು
ಮಂಡ್ಯ , ಗುರುವಾರ, 26 ಮಾರ್ಚ್ 2020 (17:28 IST)
ಕೊರೊನಾ ವೈರಸ್ ನಿರ್ಮೂಲನೆಗೆ ದೇಶದಾದ್ಯಂತ ಲಾಕ್ ಡೌನ್ ಆಚರಿಸಲಾಗುತ್ತಿದೆ.

ಲಾಕ್ ಡೌನ್ ಮೂಲಕ ಸಾಮಾಜಿಕ ಅಂತರ ಹಾಗೂ ಆರೋಗ್ಯ  ಕಾಪಾಡಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಈ ಮಧ್ಯೆ  ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸ್ವಯಂ ಸೇವಕರು ಈ ಅವಧಿಯಲ್ಲಿ   ಸಹಾಯದ ಅಗತ್ಯವಿರುವವರಿಗೆ ಆಹಾರ, ಬಟ್ಟೆ, ಮಾಸ್ಕ್, ಸ್ಯಾನಿಟೈಸರ್ , ತರಕಾರಿ, ಹಣ್ಣು, ಸ್ವಯಂಸೇವೆ ನೀಡಲು ಆಸಕ್ತಿ ಇರುವವರು ಮಂಡ್ಯ ಜಿಲ್ಲೆಯಲ್ಲಿ ಇರುವ  ತಮ್ಮ ಹೆಸರು, ವಿಳಾಸ , ಸಂಪರ್ಕ ಸಂಖ್ಯೆ ,ನೆರವು ನೀಡಬಹುದಾದ ವಸ್ತುಗಳು ಅಥವಾ ಸ್ವಯಂಸೇವಕರ ವಿವರಗಳನ್ನು ನಿಗದಿತ ನೋಂದಣಿ ನಮೂನೆಯಲ್ಲಿ ಭರ್ತಿ ಮಾಡಬೇಕು. 

ಜಿಲ್ಲಾ ನಗರಾಭಿವೃದ್ಧಿ ಕೊಶ, ಜಿಲ್ಲಾಧಿಕಾರಿಗಳ ಕಚೇರಿ, ಮಂಡ್ಯ ಇಲ್ಲಿಗೆ ಸಲ್ಲಿಸಬಹುದು.  ಜಿಲ್ಲಾಡಳಿತದೊಂದಿಗೆ   ಸಹಾಯ ಕಾರ್ಯದಲ್ಲಿ ತ್ವರಿತವಾಗಿ ಕೈಜೋಡಿಸಬಹುದು.

ಹೆಚ್ಚಿನ ವಿವರಗಳಿಗೆ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶದ, ಮಂಡ್ಯ ( ದೂ.ಸಂಖ್ಯೆ 9611515498 ) ಹಾಗೂ ಆಯುಕ್ತರು, ನಗರಸಭೆ, ಮಂಡ್ಯ ( ದೂರ. ಸಂಖ್ಯೆ.9482162772) ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್  ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯೋ ಬಿಸಿಲು ಎನ್ನುವವರು ಹೀಗೆ ಮಾಡಿ