ಅಯ್ಯೋ ಬಿಸಿಲು ಎನ್ನುವವರು ಹೀಗೆ ಮಾಡಿ

ಗುರುವಾರ, 26 ಮಾರ್ಚ್ 2020 (17:00 IST)
ಬೇಸಿಗೆ ಬಂದರೆ ಸಾಕು ಅಯ್ಯೋ ಸೆಖೆ. ತಾಳಲಾರದಷ್ಟು ಬಿಸಿಲು ಎಂದು ಹೊರಗೆ ಹೋದವರು ಹೇಳದ ದಿನ ಇರೋದಿಲ್ಲ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಹಾಗೂ ದೇಹದ ತಾಪಮಾನ ಕಾಯ್ದುಕೊಳ್ಳಲು ಹೀಗೆ ತಪ್ಪದೇ ಮಾಡಿ.

ಪ್ರತಿದಿನ ಬೆಳಿಗ್ಗೆ 1 ಲೋಟ ದಾಳಿಂಬೆ ರಸಕ್ಕೆ 3 ಹನಿ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಸೇವಿಸುವುದರಿಂದ ದೇಹದ ತಾಪಮಾನ ಸಮತೋಲನದಲ್ಲಿಡಬಹುದು. 

ನಿತ್ಯ ಮಲಗುವ ಮೊದಲು 1 ಹಿಡಿ ಗಸಗಸೆ ಜಗಿದು ತಿಂದರೆ ದೇಹದ ತಾಪಮಾನ ಹತೋಟಿಯಲ್ಲಿರುತ್ತದೆ.

1 ಲೋಟ ಹಾಲಿಗೆ 1 ಚಮಚ ಜೇನುತುಪ್ಪ ಬೇರೆಸಿ ಸೇವಿಸಿದರೆ ದೇಹದ ಉಷ್ಣಾಂಶ ಹೆಚ್ಚಾಗುವುದಿಲ್ಲ.  

ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ದೇಹದ ಉಷ್ಣಾಂಶ ಕಡಿಮೆಯಾಗುತ್ತದೆ. ಹಾಗೇ ನಿಮ್ಮ ಪಾದವನ್ನು ನೀರಿನಲ್ಲಿ ಮುಳುಗಿಸಿ ಇಡುವುದರಿಂದಲೂ ದೇಹದ ತಾಪಮಾನ ಕಡಿಮೆಯಾಗುತ್ತದೆ.

ಮೆಂತ್ಯವನ್ನು ಹಸಿಯಾಗಿ ಸೇವಿಸುವುದರಿಂದ ದೇಹದ ಉಷ್ಣಾಂಶ ಸಮತೋಲನದಲ್ಲಿರುತ್ತದೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೊರೊನಾ ಬರಬಾರದು ಅಂದ್ರೆ ಹೀಗೆ ಮಾಡಿ