Select Your Language

Notifications

webdunia
webdunia
webdunia
webdunia

ಬೇಸಿಗೆ ಕಾಲ ಶುರುವಾಯ್ತು - ಈ ವಸ್ತುಗಳು ತಪ್ಪದೇ ನಿಮ್ಮ ಮನೆಯಲ್ಲಿರಲಿ

ಬೇಸಿಗೆ ಕಾಲ ಶುರುವಾಯ್ತು - ಈ ವಸ್ತುಗಳು ತಪ್ಪದೇ ನಿಮ್ಮ ಮನೆಯಲ್ಲಿರಲಿ
ಕಲಬುರಗಿ , ಮಂಗಳವಾರ, 3 ಮಾರ್ಚ್ 2020 (20:16 IST)
ಬೇಸಿಗೆಯಲ್ಲಿ ಈ ವಸ್ತುಗಳು ನಿಮ್ಮ ಮನೆಯಲ್ಲಿ ಇರಲೇಬೇಕು. 

ಸೂರ್ಯ ನಗರಿ ಖ್ಯಾತಿಯ ಕಲಬುರಗಿ ನಗರದಲ್ಲಿ ಬೇಸಿಗೆ ಆರಂಭಗೊಂಡಿದ್ದು, ಜೂನ್ ಅಂತ್ಯದವರೆಗೆ ಬಿಸಿಲಿನ ಪ್ರಮಾಣ ಇನ್ನೂ ಹೆಚ್ಚಲಿದೆ. ಬೇಸಿಗೆ ಕಾಲದಲ್ಲಿ ಸಾಮಾನ್ಯವಾಗಿ ಅತೀ ಹೆಚ್ಚು ಅಗ್ನಿ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟವಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲೆಯ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸ್ಥಳಗಳಲ್ಲಿ ಅಗ್ನಿಶಾಮಕ ಉಪಕರಣ ಮತ್ತು ನೀರಿನ ಸಂಗ್ರಹಗಾರಗಳನ್ನು ಹೊಂದುವಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಟಿ. ಪರಶುರಾಮ ಸಲಹೆ ನೀಡಿದ್ದಾರೆ.

ಕಲಬುರಗಿ ಜಿಲ್ಲೆಯ ಸಣ್ಣ, ಮಧ್ಯಮ ಹಾಗೂ ಬೃಹತ್ ಕೈಗಾರಿಕಾ ಘಟಕಗಳು, ಟೈರ್ ಕಾರ್ಖಾನೆಗಳು, ಪೀಠೋಪಕರಣಗಳ ಮಳಿಗೆಗಳು, ಗೋದಾಮುಗಳು, ತೈಲ ಸಂಗ್ರಹಗಾರಗಳು, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು, ಬಹುಮಹಡಿ ಕಟ್ಟಡಗಳು ಮತ್ತು ವಾಣಿಜ್ಯ ಮಳಿಗೆಗಳು ಇತ್ಯಾದಿಗಳಲ್ಲಿ ಅಗ್ನಿ ಅನಾಹುತಗಳನ್ನು ತಡೆಯಲು ಅಗ್ನಿಶಾಮಕ ಉಪಕರಣಗಳನ್ನು ಮತ್ತು ಸಾಕಷ್ಟು ನೀರಿನ ಸಂಗ್ರಹಗಾರ ಹೊಂದುವುದು ತುಂಬಾ ಅವಶ್ಯವಾಗಿದೆ.

ಅಗ್ನಿ ಅವಘಡ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅಗ್ನಿಶಾಮಕ ಇಲಾಖೆಯಿಂದ ಉಚಿತವಾಗಿ ನಿರಂತರ ಉಪನ್ಯಾಸ ಮತ್ತು ಅಣುಕು ಪ್ರದರ್ಶನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಕುರಿತು ಹೆಚ್ಚಿನ ವಿವರಗಳಿಗೆ ಮತ್ತು ಉಪನ್ಯಾಸ ಮತ್ತು ಅಣಕು ಪ್ರದರ್ಶನಕ್ಕೆ ಅಗ್ನಿಶಾಮಕ ಠಾಣೆಯನ್ನು ಸಂಪರ್ಕಿಸಬೇಕು ಎಂದು ಅವರು ತಿಳಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಹೈದ್ರಾಬಾದ್‌ನಲ್ಲಿ ಕೊರೊನಾ ಸೋಂಕು : ಬೆಚ್ಚಿ ಬೀಳ್ತಿರೋ ಗಡಿ ಜಿಲ್ಲೆಯ ಜನರು