Select Your Language

Notifications

webdunia
webdunia
webdunia
webdunia

ಕೊರೊನಾ ಮಟ್ಟಹಾಕಲು ರಸ್ತೆಗಿಳಿದ ಅಗ್ನಿಶಾಮಕ ತಂಡ

ಕೊರೊನಾ ಮಟ್ಟಹಾಕಲು ರಸ್ತೆಗಿಳಿದ ಅಗ್ನಿಶಾಮಕ ತಂಡ
ಕಲಬುರಗಿ , ಬುಧವಾರ, 25 ಮಾರ್ಚ್ 2020 (18:23 IST)
ಕೊರೋನಾ ಸಾಂಕ್ರಾಮಿಕ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಇದೀಗ ಅಗ್ನಿಶಾಮಕ ತಂಡ ಕೈ ಜೋಡಿಸಿದೆ.

ಕಲಬುರಗಿ ನಗರದೆಲ್ಲೆಡೆ ಶುಚಿತ್ವ ಮತ್ತು ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಮಹಾನಗರ ಪಾಲಿಕೆಯು ಡಿಸ್ ಇನ್ಫೆಕ್ಷನ್ ಮತ್ತು ಹೈಪೊಫ್ಲೋರೈಡ್ ಔಷಧಿ ಸಿಂಪರಣೆ ಕಾರ್ಯ ಮಾಡುತ್ತಿದ್ದು, ಇದಕ್ಕೀಗ ಅಗ್ನಿಶಾಮಕ ಇಲಾಖೆಯ ಫೈರ್ ತಂಡ ಕೈಜೋಡಿಸಿದೆ.
ಕಲಬುರಗಿಯ ಇ.ಎಸ್‌.ಐ.ಸಿ ಆಸ್ಪತ್ರೆ ಎದುರುಗಡೆ ಇರುವ ಜ್ಞಾನ‌ಗಂಗಾ ಕಾಲೋನಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರ ಸೂಚನೆಯಂತೆ ಫೈರ್ ತಂಡ ಫಾಗಿಂಗ್ ಕಾರ್ಯದಲ್ಲಿ ಪಾಲ್ಗೊಂಡರು.

ಮಹಾಮಾರಿ ಕೊರೋನಾ ಸೊಂಕು ವ್ಯಕ್ತಿಯ ನೇರ ಸಂಪರ್ಕದಲ್ಲಿ ಬರುವವರಿಗೆ ಅಥವಾ ಕೋವಿಡ್-19 ಪಾಸಿಟಿವ್ ಇರುವ ವ್ಯಕ್ತಿ ಕೆಮ್ಮುವುದರಿಂದ ಬರುವ ಡ್ರಾಪ್ಲೆಟ್ ಮುಖಾಂತರ ಇನ್ಬೊಬ್ಬ ವ್ಯಕ್ತಿಗೆ ಸೊಂಕು ಹರಡುತ್ತದೆ.

ಇಂತಹ ಸೊಂಕು ಸಾರ್ವಜನಿಕ ಸ್ಥಳದಲ್ಲಿ ಇನ್ನೊಬ್ಬರಿಗೆ ತಗುಲದಂತೆ ಮುನ್ನೆಚರಿಕೆ ಕ್ರಮವಾಗಿ ಪಾಲಿಕೆಯಿಂದ ನಗರದ ಪ್ರಮುಖ ರಸ್ತೆ, ಬೀದಿ, ಪ್ರದೇಶ, ಆಸ್ಪತ್ರೆ, ಸಾರ್ವಜನಿಕ ಕಚೇರಿಗಳ ಸುತ್ತಮುತ್ತ ಔಷಧಿ ಸಿಂಪರಣೆ ಕಾರ್ಯ ಕಳೆದ‌ ಎರಡ್ಮೂರು ದಿನಗಳಿಂದ‌ ಯುದ್ದೋಪಾದಿಯಲ್ಲಿ ಮಾಡಲಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಎಫೆಕ್ಟ್ : ತಳ್ಳುವ ಗಾಡಿ ಮೂಲಕ ತರಕಾರಿ, ದಿನಸಿ ಮಾರಾಟ