Publish Date: Tue, 06 Jul 2021 (19:16 IST)
Updated Date: Tue, 06 Jul 2021 (19:18 IST)
ಇಂಗ್ಲೆಂಡ್ ತಂಡದ 7 ಆಟಗಾರರು ಹಾಗೂ ಸಿಬ್ಬಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಇಡೀ ತಂಡ ಐಸೋಲೇಷನ್ ಗೆ ಒಳಗಾಗಿದೆ. ಇದರಿಂದ ಪಾಕಿಸ್ತಾನ ವಿರುದ್ಧದ ಸರಣಿಗೆ ಕೇವಲ ಎರಡು ದಿನ ಇರುವಾಗ ಹೊಸ ತಂಡವನ್ನು ಆಯ್ಕೆ ಮಾಡಬೇಕಾದ ಸಂಕಷ್ಟಕ್ಕೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸಿಲುಕಿದೆ.
ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿ ಮುಗಿಸಿದ ಇಂಗ್ಲೆಂಡ್ ತಂಡ ಇದೀಗ ಸೀಮಿತ ಓವರ ಗಳ ಸರಣಿಗೆ ಸಿದ್ಧಗೊಳ್ಳಬೇಕಿತ್ತು. ಆದರೆ ಇದೀಗ ತಂಡದ ಎಲ್ಲರೂ ಐಸೋಲೇಷನ್ ಗೆ ಒಳಗಾಗಿದ್ದಾರೆ. ಆದರೂ ಟಿ-20 ಸರಣಿ ನಡೆಯುವುದು ಖಚಿತ ಎಂದು ಇಸಿಬಿ ದೃಢಪಡಿಸಿದೆ.
ಬ್ರಿಟನ್ ಸರಕಾರದ ನಿಯಮ ಪ್ರಕಾರ ಜುಲೈ 4ರಿಂದ ಕ್ವಾರಂಟೈನ್ ಅವಧಿ ಆರಂಭವಾಗಿದೆ. ಇದರಿಂದ ಪ್ರಮುಖ ಆಟಗಾರರು ಅಲಭ್ಯರಾಗಲಿದ್ದು, ಹೊಸ ತಂಡವನ್ನು ಆಯ್ಕೆ ಮಾಡಬೇಕಿದೆ.