Publish Date: Sat, 21 Nov 2020 (13:05 IST)
Updated Date: Sat, 21 Nov 2020 (13:08 IST)
ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಸ್ವಪಕ್ಷೀಯ ನಾಯಕರ ನಡುವೆ ಕೆಸರ ಎರೆಚಾಟ ನಡೆಯುತ್ತಿದೆ. ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ಮತ್ಯು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ನಡುವೆ ಭಿನ್ನಮತ ಸ್ಪೋಟವಾಗಿದೆ.
ಎಲ್.ಆರ್.ಶಿವರಾಮೇಗೌಡರು ಮೊದಲು ನಮ್ಮ ಪಕ್ಷದಲ್ಲಿ ಇದ್ದರು. ಈಗ ಅವರು ಏನು ಮಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಟೀಕೆ ಮಾಡುವುದಕ್ಕೂ ಮುನ್ನ ಕಾಮನ್ ಸೆನ್ಸ್ ಇರಬೇಕು. ನಾನು ಎಲ್ಲಿದ್ದೀನಿ , ಏನ್ ಆಗಿದ್ದೇನೆಂದು ತಿಳಿದಿರಬೇಕು. ಸರ್ಕಾರದಲ್ಲಿ ಏನಾಗಿದ್ದೇನೆ ಎಂಬ ಪರಿಜ್ಞಾನ ಇರಬೇಕು ಎಂದು ಎಲ್.ಆರ್.ಶಿವರಾಮೇಗೌಡರ ವಿರುದ್ಧ ಸುರೇಶ್ ಗೌಡ ಕಿಡಿಕಾರಿದ್ದಾರೆ.
pavithra
Publish Date: Sat, 21 Nov 2020 (13:05 IST)
Updated Date: Sat, 21 Nov 2020 (13:08 IST)