Select Your Language

Notifications

webdunia
webdunia
webdunia
webdunia

ಮಂಡ್ಯ ಸಂಸದೆ ಸುಮಲತಾರನ್ನು ಟೀಕಿಸಿದ ಪ್ರತಾಪ್ ಸಿಂಹ ; ವಿಡಿಯೋ ವೈರಲ್

ಮಂಡ್ಯ ಸಂಸದೆ ಸುಮಲತಾರನ್ನು ಟೀಕಿಸಿದ ಪ್ರತಾಪ್ ಸಿಂಹ ; ವಿಡಿಯೋ ವೈರಲ್
ಮಂಡ್ಯ , ಶನಿವಾರ, 14 ನವೆಂಬರ್ 2020 (12:12 IST)
ಮಂಡ್ಯ : ಸಂಸದೆ ಸುಮಲತಾ ಏನೂ ಕೆಲಸ ಮಾಡುವುದಿಲ್ಲ  ಎಂದು ಮಂಡ್ಯ ಸಂಸದೆ ಸುಮಲತಾ ಬಗ್ಗೆ ಪ್ರತಾಪ್ ಸಿಂಹ ಟೀಕಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿ ವಿಚಾರದ ಬಗ್ಗೆ  ಅಧಿಕಾರಿಗೆ ಕರೆ ಮಾಡಿ ಮಾತನಾಡುವ ವೇಳೆ ಸಂಸದರು ಕೆಲಸ ಮಾಡುವುದಕ್ಕೆ ಬಿಡಲ್ಲವೆಂದು ಸುಮಲತಾ ವಿರುದ್ಧ ಪ್ರತಾಪ್ ಸಿಂಹಗೆ ಅಧಿಕಾರಿ ದೂರು ನೀಡಿದ ವೇಳೆ ಸಂಸದ ಪ್ರತಾಪ್ ಸಿಂಹ ಸುಮಲತಾ ಬಗ್ಗೆ ಟೀಕೆ ಮಾಡಿದ್ದಾರೆ ಎನ್ನಲಾಗಿದೆ.

ಹಾಗೇ ಹೆಚ್.ಡಿ.ದೇವೇಗೌಡ ಕುಟುಂಬದವರನ್ನು ಸೋಲಿಸಲು ಮಂಡ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾರನ್ನ ಗೆಲ್ಲಿಸಿದ್ದಾರೆ. ಸಂಸದೆ ಸುಮಲತಾ ಏನೂ ಕೆಲಸ ಮಾಡುವುದಿಲ್ಲ. ಯಾವುದೇ ಕೆಲಸವಿದ್ದರೂ ನನಗೆ ಹೇಳಿ ಎಂದು ಯಲಿಯೂರಿನಲ್ಲಿ ಅಹವಾಲು ಸ್ವೀಕರಿಸುವ ವೇಳೆ ಸಂಸದೆಯನ್ನು ಟೀಕಿಸುತ್ತಾ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ನೆಹರೂ ಜನ್ಮದಿನದ ಹಿನ್ನಲೆ; ಪ್ರಧಾನಿ ಮೋದಿ, ರಾಹುಲ್ ಗಾಂಧಿಯಿಂದ ಗೌರವ ಸಲ್ಲಿಕೆ