Select Your Language

Notifications

webdunia
webdunia
webdunia
webdunia

ಮುಂದುವರಿದ ನಕಲಿ ವೈದ್ಯರ ಹಾವಳಿ

ಮುಂದುವರಿದ ನಕಲಿ ವೈದ್ಯರ ಹಾವಳಿ
ಚಿಕ್ಕಬಳ್ಳಾಪುರ , ಶುಕ್ರವಾರ, 16 ನವೆಂಬರ್ 2018 (18:49 IST)
ಆ ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರುತ್ತಿದೆ. ಎಸ್ ಎಸ್ ಎಲ್ ಸಿ ಪಾಸ್ ಅಥವಾ ಫೇಸ್ ಆದವರೂ ಸಹ ವೈದ್ಯರೆಂದು ಅಮಾಯಕ ಜನರಿಗೆ ಚಿಕಿತ್ಸೆ ನೀಡಿ ಹಣ ಪೀಕುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ನೂರಾರು ನಕಲಿ ವೈದ್ಯರ ಕಾರುಬಾರು ಜೋರಾಗಿದೆ. ಹಳೆಯ ಅಡುಗೆ ಮನೆಯನ್ನು ಕ್ಲಿನಿಕ್‌ಮಾಡಿಕೊಂಡಿರುವ ವೈದ್ಯ ಮಹಾಶಯನೊಬ್ಬ sslc ಮಾಡಿಕೊಂಡು ವೈದ್ಯಕೀಯ ವೃತ್ತಿ ಮಾಡುತ್ತಿರುವ ಘಟನೆ ವರದಿಯಾಗಿದೆ.

ಆರೋಗ್ಯ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಜಯರಾಮರೆಡ್ಡಿ ಎಂಬಾತ ಆಂದ್ರ ಮೂಲದವನಾಗಿದ್ದಾನೆ.  ಜಯರಾಮರೆಡ್ಡಿ ನಕಲಿ ವೈದ್ಯ ನಾಗಿ ದಿಬ್ಬೂರಹಳ್ಳಿ ಗ್ರಾಮದಲ್ಲಿ ಪುಷ್ಪ ಕ್ಲಿನಿಕ್ ಎಂದು ನಾಮಫಲಕ ಹಾಕಿಕೊಂಡು ದಂಧೆ ನಡೆಸುತ್ತಿದ್ದಾನೆ.

ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ನಕಲಿ ವೈದ್ಯ ವೃತ್ತಿ ಮಾಡುತ್ತಿದ್ದರೂ ಸಹ ಕಂಡು ಕಾಣದಂತೆ ನುಣುಚಿಕೊಳ್ಳುತ್ತಿರುವ ಆರೋಗ್ಯ ಅಧಿಕಾರಿಗಳು ನಡೆದುಕೊಳ್ಳುತ್ತಿರುವ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಮೇಯರ್ ಚುನಾವಣೆ: ರೆಸಾರ್ಟ ಪಾಲಿಟಿಕ್ಸ್ ಶುರು