Publish Date: Fri, 16 Nov 2018 (17:16 IST)
Updated Date: Fri, 16 Nov 2018 (17:20 IST)
ಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಪೋರೇಟರ್ ಗಳ ರೆಸಾರ್ಟ ಪಾಲಟಿಕ್ಸ್ ಶುರುವಾಗಿದೆ.
ಮೈಸೂರಿನಲ್ಲಿ ನಡೆಯಲಿರುವ ಮೇಯರ್ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಆರಂಭಗೊಂಡಿದೆ.
ಮೈಸೂರು ಪಾಲಿಕೆ ಸದಸ್ಯರು ಬಿಡದಿಯ ಈಗಲ್ ಟನ್ ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ. ರೆಸಾರ್ಟ್ ನಲ್ಲಿ 15 ರೂಂಗಳನ್ನು ಕಾರ್ಪೊರೇಟರ್ಸ್ ಗಳಿಗಾಗಿಯೇ ಬುಕ್ ಮಾಡಲಾಗಿದೆ. 19 ಮಂದಿ ಜೆಡಿಎಸ್ ಕಾರ್ಪೊರೇಟರ್ಸ್ ಸೇರಿ ಸುಮಾರು 25 ಮಂದಿ ರೆಸಾರ್ಟ್ ಗೆ ಶಿಫ್ಟ್ ಆಗಲು ತಯಾರಿ ನಡೆದಿದೆ.
ಸಮಿಶ್ರ ಸರ್ಕಾರಕ್ಕೆ ಎಲ್ಲಾ ಹಂತದಲ್ಲೂ ಗೆಲುವು ತಂದು ಕೊಡುತ್ತಿರುವ ಈಗಲ್ ಟನ್ ರೆಸಾರ್ಟ್, ಈಗ ಮೇಯರ್ ಸ್ಥಾನಕ್ಕೂ ಅನುಕೂಲ ಮಾಡಿಕೊಡುತ್ತಾ ಎನ್ನೋದನ್ನು ಕಾದು ನೋಡಬೇಕು.