Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಕಾಲು ಇಟ್ಟ ಕಡೆ ಕಾಂಗ್ರೆಸ್‌ಗೆ ಸೋಲು: ಅಶೋಕ್‌ ಲೇವಡಿ

Congress leader Rahul Gandhi, BJP leader Ashok, Bihar election

Sampriya

ಬೆಂಗಳೂರು , ಬುಧವಾರ, 12 ನವೆಂಬರ್ 2025 (16:00 IST)
ಬೆಂಗಳೂರು: ರಾಹುಲ್ ಗಾಂಧಿ ಅವರು ಕಾಲು ಇಟ್ಟ ಕಡೆ ಕಾಂಗ್ರೆಸ್‌ ಸೋಲಾಗುತ್ತದೆ  ಎಂದು ವಿಪಕ್ಷ ನಾಯಕ ಆರ್. ಅಶೋಕ್  ಲೇವಡಿ ಮಾಡಿದ್ದಾರೆ.

ಬಿಹಾರ ಚುನಾವಣೆಯ ಕುರಿತ ಮತದಾನೋತ್ತರ ಸಮೀಕ್ಷೆ ಕುರಿತಂತೆ ಅವರು ಮಾತನಾಡಿದ್ದಾರೆ. ಎಕ್ಸಿಟ್ ಪೋಲ್‌ನಲ್ಲಿ 12ಕ್ಕೂ ಹೆಚ್ಚು ರಿಪೋರ್ಟ್‌ನಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಘಟ್‌ಬಂಧನ್ ಒಂದರಲ್ಲೂ ಮುಂದೆ ಬಂದಿಲ್ಲ. 14ರಂದು ರಾಹುಲ್ ಗಾಂಧಿ ಫಸ್ಟ್ ರಿಯಾಕ್ಷನ್ ವೋಟ್ ಚೋರಿ ಆಗಿದೆ. ಎರಡನೇ ರಿಯಾಕ್ಷನ್ ವೋಟಿಂಗ್ ಮಿಷನ್ ಸರಿಯಿಲ್ಲ ಎಂದು ಹೇಳುತ್ತಾರೆ ಎಂದು ಭವಿಷ್ಯ ನುಡಿದರು. 

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸುತ್ತದೆ. ಕಾಂಗ್ರೆಸ್ ದೇಶದಲ್ಲಿ ಕಾಣೆ ಆಗೋ ಪಾರ್ಟಿ ಆಗಲಿದೆ. ರಾಹುಲ್ ಗಾಂಧಿ ನಾಯಕತ್ವ ಬಂದ ಮೇಲೆ ಸೋಲಿನ ಸೆಂಚುರಿ ಆಗಿದೆ. ಈಗ ವಿದೇಶ ಪ್ರವಾಸಕ್ಕೆ ಹೋಗುತ್ತಾರಂತೆ. ರಾಹುಲ್ ಗಾಂಧಿ ಜವಾಬ್ದಾರಿ ಇರೋ ವಿಪಕ್ಷ ನಾಯಕ ಅಲ್ಲ. ಸಂಸತ್‌ನಲ್ಲಿ ಅವರ ಹಾವ-ಭಾವ, ಪಾಕಿಸ್ತಾನದ ಬಗ್ಗೆ ಸಾಫ್ಟ್ ಆಗಿರೋದು ನೋಡಿದ್ದೇವೆ ಎಂದು ಕಿಡಿಕಾರಿದರು.  

ದೇಶದಲ್ಲಿ ಮೊದಲ ಬಾರಿಗೆ ನಕ್ಸಲ್ ಇರೋ ಕ್ಷೇತ್ರದಲ್ಲೂ ಶಾಂತಿಯುತ ಮತದಾನ ಆಗಿದೆ. ಅಮಿತ್ ಶಾ ಗೃಹಮಂತ್ರಿ ಆದ ಮೇಲೆ ನಕ್ಸಲರನ್ನ ಮಟ್ಟ ಹಾಕೋ ಕೆಲಸ ಮಾಡಿದ್ದಾರೆ ಎಂದರು. 

ರಿಯಲ್ ಪೋಲ್‌ನಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ. ಎಕ್ಸಿಟ್ ಪೋಲ್ ಟ್ರೈಲರ್ ಇದ್ದ ಹಾಗೆ. ನವೆಂಬರ್ 14ರಂದು ಎನ್‌ಡಿಎ ಗೆಲ್ಲುತ್ತೆ. ಕಾಂಗ್ರೆಸ್ ದೇಶದಲ್ಲಿ ಕಾಣೆ ಆಗೋ ಪಾರ್ಟಿ ಆಗುತ್ತದೆ ಎಂದರು.  


Share this Story:

Follow Webdunia kannada

ಮುಂದಿನ ಸುದ್ದಿ

ಪಿತೂರಿ ಹಿಂದಿರುವವರನ್ನು ಮಟ್ಟಹಾಕುದ್ದೇವೆ: ದೆಹಲಿ ಸ್ಫೋಟದ ಕುರಿತು ಮೋದಿ ವಾರ್ನಿಂಗ್‌